ಹಿರೇಕೆರೂರು:ಅನರ್ಹ ಶಾಸಕಬಿ.ಸಿ.ಪಾಟೀಲ್ ಸಿದ್ದರಾಮಯ್ಯನವರ ಕಾಲಿನ ದೂಳಿಗೂ ಸಮವಿಲ್ಲ. ಅವರಿಗೆ ಯಾಕೆ ಹೋಲಿಕೆ ಮಾಡುತ್ತೀರಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗುಡುಗಿದ್ದಾರೆ.
ಬಿ.ಸಿ. ಪಾಟೀಲ್ ಸಿದ್ದು ಕಾಲಿನ ದೂಳಿಗೂ ಸಮವಿಲ್ಲ: ದಿನೇಶ್ ಗುಂಡೂರಾವ್ ವಾಗ್ದಾಳಿ - ಕುದುರೆ ವ್ಯಾಪಾರಕ್ಕೆ ಮತದಾರ ಬಿಜೆಪಿಗೆ ತಕ್ಕ ಉತ್ತರ
ಬಿ.ಸಿ.ಪಾಟೀಲ್ ಸಿದ್ದರಾಮಯ್ಯನವರ ಕಾಲಿನ ದೂಳಿಗೂ ಸಮವಿಲ್ಲ. ಅವರಿಗೆ ಯಾಕೆ ಹೋಲಿಕೆ ಮಾಡುತ್ತೀರಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗುಡುಗಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಬಿ.ಸಿ.ಪಾಟೀಲ್ ಪಕ್ಷ ಬಿಟ್ಟಿದ್ದಕ್ಕೂ, ಸಿದ್ದರಾಮಯ್ಯನವರು ಪಕ್ಷ ಬಿಟ್ಟಿದ್ದಕ್ಕೂ ತುಂಬಾನೆ ವ್ಯಾತ್ಯಾಸವಿದೆ. ಡಿಸೆಂಬರ್ 9ರ ನಂತರ ಮಹಾರಾಷ್ಟ್ರದಲ್ಲಿ ಅನುಭವಿಸಿದಂತೆ ರಾಜ್ಯದಲ್ಲಿ ಬಿಜೆಪಿ ಮುಖಭಂಗವನ್ನ ಅನುಭವಿಸಲಿದೆ ಎಂದು ಭವಿಷ್ಯ ನುಡಿದರು. ಕುದುರೆ ವ್ಯಾಪಾರಕ್ಕೆ ಮತದಾರ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾನೆ ಎಂದು ಗುಂಡೂರಾವ್ ಹೇಳಿದರು.
ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಗೃಹ ಸಚಿವರ ಕಾರು ತಪಾಸಣೆ ತಪ್ಪಿಸಿದ್ದಕ್ಕೆ ಡ್ರೈವರ್ ಮೇಲೆ ಕಂಪ್ಲೆಂಟ್ ಆಗಿದೆ. ನಾಲ್ವರು ಪೊಲೀಸ್ ಕಾನ್ಸ್ಟೇಬಲ್ ಅಮಾನತು ಮಾಡಿದ್ದಾರೆ. ತಪಾಸಣೆ ಆಗಿದ್ದರೆ ಏನಾಗ್ತಿತ್ತು ಅನ್ನೋ ಸಂಶಯ ಎಲ್ಲರಲ್ಲಿ ಮೂಡ್ತಿದೆ. ಚುನಾವಣೆ ಮುಗಿಯುವವರೆಗೂ ಗೃಹ ಸಚಿವರನ್ನ ರಾಜ್ಯದ ಗಡಿಯಿಂದ ಹೊರಗೆ ಇರುವಂತೆ ನೋಡಿಕೊಳ್ಳಬೇಕು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಈವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡದ್ದಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.