ರಾಣೆಬೆನ್ನೂರ: 'ಉತ್ತರ ಕರ್ನಾಟಕದ ಹೆಬ್ಬಾಗಿಲು' ಎಂದು ಪ್ರಖ್ಯಾತಿಗೊಂಡಿರುವ ರಾಣೆಬೆನ್ನೂರಿನಲ್ಲಿ ಮತ್ತೊಂದು ಉಪಕದನಕ್ಕೆ ವೇದಿಕೆ ಸಜ್ಜಾಗಿದೆ. ಕೋಳಿವಾಡ ಮತ್ತು ಆರ್.ಶಂಕರ್ ನಡುವಿನ ಜಿಜ್ಜಾಜಿದ್ದಿನ ಪೈಪೋಟಿಗೆ ಅಖಾಡ ಸಿದ್ದವಾಗುತ್ತಿದೆ.
ಸುಮಾರು 30 ವರ್ಷ ಅಧಿಕಾರದಲ್ಲಿದ್ದ ಕೆ.ಬಿ.ಕೋಳಿವಾಡರನ್ನು ದೂರದ ಬೆಂಗಳೂರಿನಿಂದ ಬಂದಿದ್ದ, ಮಾಜಿ ಉಪಮೇಯರ್ ಆರ್. ಶಂಕರ್ 2018 ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸುವ ಮೂಲಕ ರಾಣೆಬೆನ್ನೂರಿನ ಗದ್ದುಗೆ ಹಿಡಿದಿದ್ದರು. ನಂತರ ರಾಜಕೀಯ ಬೆಳವಣಿಗೆಯಲ್ಲಿ ಆರ್.ಶಂಕರ್ ಸರಿಯಾದ ಮಾರ್ಗ ಅನುಸರಿಸದೆ ಶಾಸಕ ಸ್ಥಾನದಿಂದ ಅನರ್ಹವಾಗಿ ತಮ್ಮ ಅಸ್ತಿತ್ವವನ್ನು ರಾಣೆಬೆನ್ನೂರಲ್ಲಿ ಕಳೆದುಕೊಂಡರು. ಈಗ ಮತ್ತೆ ಉಪಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಅವರು ಕ್ಷೇತ್ರದಲ್ಲಿ ಸ್ಪರ್ಧಿಸಲು ಬರುವುದಿಲ್ಲ. ಹೀಗಾಗಿ ಕೋಳಿವಾಡರು ರಾಣೆಬೆನ್ನೂರಿನೊಳಗೆ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ರೆಡಿಯಾಗಿದ್ದಾರೆ.
ಕೋಳಿವಾಡ vs ಶಂಕರ್ :
ಕಳೆದ ಬಾರಿ ಚುನಾವಣೆಯಲ್ಲಿ ಆರ್.ಶಂಕರ್ ಹಾಗೂ ಕೋಳಿವಾಡರ ನಡುವೆ ನೇರ ಪೈಟ್ ಏರ್ಪಟ್ಟಿತು. ಈ ವೇಳೆ ಗೆಲುವು ಶಂಕರ್ ಪಾಲಾದ ಹಿನ್ನೆಲೆಯಲ್ಲಿ ಕೋಳಿವಾಡ ಮತ್ತೊಂದು ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ. ಅಕ್ಟೋಬರ್ 21ಕ್ಕೆ ನಡೆಯುವ ಉಪಚುನಾವಣೆ ಕೋಳಿವಾಡ ಕುಟುಂಬ ಹಾಗೂ ಶಂಕರ ಕುಟುಂಬ ನಡುವೆ ನಡೆಯುವ ಹೋರಾಟ ಎಂದೇ ಹೇಳಲಾಗುತ್ತಿದೆ.
ಕಾಂತೇಶನ ಚಿತ್ತ ರಾಣೆಬೆನ್ನೂರ ನತ್ತ: