ಹಾವೇರಿ:ಮಾಜಿ ಸಚಿವ ಡಿ ಕೆ ಶಿವಕುಮಾರ್ ಮತ್ತು ಅನರ್ಹ ಶಾಸಕರ ವೈಯಕ್ತಿಕ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲವೆಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ಭವಿಷ್ಯ ನುಡಿದು ಯಾರ ಮನಸ್ಸಿಗೂ ನೋವುಂಟು ಮಾಡಲು ಬಯಸುವುದಿಲ್ಲ ಎಂದರು. ಇನ್ನು ಬರುವ ಕಾರ್ತಿಕ ಮಾಸದವರೆಗೆ ಮಳೆ, ಗಾಳಿ ಮತ್ತು ಜಲದಿಂದ ವಿಪತ್ತು ಎದುರಾಗಲಿದೆ ಎಂದು ಪ್ರಕೃತಿ ವೈಪರಿತ್ಯದ ಬಗ್ಗೆ ಸ್ವಾಮೀಜಿ ಭವಿಷ್ಯ ನುಡಿದ್ರು.