ಹಾವೇರಿ : ರಮೇಶ್ ಜಾರಕಿಹೊಳಿ ಮಾಡಿರುವುದು ಅತ್ಯಂತ ನಾಚಿಕೆಗೇಡಿನ ಕೆಲಸ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.
ನಗರದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಯಾರೋ ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದ್ದಾರೆ ಎನ್ನುವ ಜಾರಕಿಹೊಳಿಗೆ ಕನಿಷ್ಠ ಬುದ್ಧಿಯಾದರೂ ಬೇಡ್ವಾ ಎಂದು ಪ್ರಶ್ನಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿ ಓದಿ : ಸಾಹುಕಾರ್ ಸಿಡಿ ಪ್ರಕರಣ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ
ಸಿಎಂ ಬಿ ಎಸ್.ಯಡಿಯೂರಪ್ಪ ಬಜೆಟ್ ಮಂಡಿಸಲು ಮುಂದಾಗಿದ್ದಾರೆ. ಈ ಕುರಿತಂತೆ ರೈತರನ್ನು ಕರೆದು ಮಾತನಾಡಿಸಿಲ್ಲ. ಕನಿಷ್ಠ ಪಕ್ಷ ರೈತ ಮುಖಂಡರ ಜೊತೆನೂ ಚರ್ಚೆ ಮಾಡಿಲ್ಲ. ಹೀಗಾಗಿ, ಸಿಎಂ ರೈತರಿಗೆ ಯಾವ ರೀತಿಯ ಬಜೆಟ್ ನೀಡುತ್ತಾರೆ ಎಂಬ ಅನುಮಾನ ಶುರುವಾಗಿದೆ. ಬಜೆಟ್‌ನಲ್ಲಿ ರೈತರ ಉದ್ಧಾರಕ್ಕಾಗಿ ಯಾವೆಲ್ಲಾ ಯೋಜನೆಗಳನ್ನು ರೂಪಿಸುತ್ತಾರೆ ಎಂದು ಎದುರು ನೋಡುತ್ತಿದ್ದೇವೆ. ರೈತರ ಹಿತ ಕಾಪಾಡದಿದ್ದರೆ ರಾಜ್ಯಾದ್ಯಂತ ರೈತರೆಲ್ಲ ಬಜೆಟ್‌ಗೆ ಖಾರವಾಗಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ರವಾನಿಸಿದರು.