ಕರ್ನಾಟಕ

karnataka

ETV Bharat / state

ಬಿಜೆಪಿ ಜಯಭೇರಿ... ಹಾವೇರಿಯಲ್ಲಿ ಸಂಭ್ರಮಿಸಿದ ನವಜೋಡಿ!

ಕೇಸರಿ ಪಡೆ ನಿರೀಕ್ಷೆಗೂ ಮೀರಿ ಜಯಭೇರಿ ಬಾರಿಸಿದ ಹಿನ್ನೆಲೆ ನವವಿವಾಹಿತ ಜೋಡಿಯೊಂದು ಮದುವೆ ಮಂಟಪ ಬಿಟ್ಟು ಬಂದು ವಿಜಯೋತ್ಸವ ಆಚರಿಸಿದೆ.

ನವವಿವಾಹಿತ ಜೋಡಿಯ ಬಿಜೆಪಿ ವಿಜಯೋತ್ಸವ ಆಚರಣೆ

By

Published : May 23, 2019, 8:12 PM IST

ಹಾವೇರಿ:ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಡೆ ನಿರೀಕ್ಷೆಗೂ ಮೀರಿ ಜಯಭೇರಿ ಬಾರಿಸಿದೆ. ಈ ಹಿನ್ನೆಲೆಯಲ್ಲಿ ಹಾವೇರಿಯಲ್ಲೊಂದು ನವವಿವಾಹಿತ ಜೋಡಿ ಬಿಜೆಪಿ ಗೆಲುವಿನ ವಿಜಯೋತ್ಸವ ಆಚರಿಸಿ ಸಂಭ್ರಮಿಸಿತು.

ನವವಿವಾಹಿತ ಜೋಡಿಯ ವಿಜಯೋತ್ಸವ

ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರೇಶ್ ಹಿರೇಮಠ ಮತ್ತು ನಯನಾ ಎಂಬುವರು ವಿಜಯೋತ್ಸವ ಆಚರಿಸುವ ಮೂಲಕ ಗಮನ ಸೆಳೆದರು. ಬಿಜೆಪಿ ಗೆಲುವು ಖಚಿತವಾಗುತ್ತಿದ್ದಂತೆ ಮದುವೆ ಮಂಟಪದಿಂದ ಹೊರಗೆ ಬಂದು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಕೇಸರಿ ಜಯವನ್ನ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮೋದಿಗೆ ಜಯಕಾರ ಹಾಕುವ ಮೂಲಕ ದಂಪತಿಯ ಸಂಬಂಧಿಕರು ವಿಜಯೋತ್ಸವ ಆಚರಿಸಿದರು.

ABOUT THE AUTHOR

...view details