ಹಾವೇರಿ: ಕನ್ನಡ ಇಂಗ್ಲೀಷ್ ನಿಘಂಟು ರಚಿಸಿದ ಮೊದಲಿಗರು ಡಾ ಫರ್ಡಿನಾಂಡ್ ಕಿಟಲ್. ಕನ್ನಡದಲ್ಲಿ ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದ ಕಿಟಲ್ ಮೂಲ ಜರ್ಮನ್. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಫರ್ಡಿನಾಂಡ್ ಕಿಟಲ್‌ರ ಮೊಮ್ಮಕ್ಕಳನ್ನು ಕರೆಸಬೇಕು ಎನ್ನುವುದು ಹಲವು ಕನ್ನಡ ಸಾಹಿತಿಗಳ ಒತ್ತಾಸೆ.
ಕಿಟಲ್ ಮರಿಮೊಮ್ಮಗಳು ಅಲ್ಮಥ್ ಅವರು ಮಾತನಾಡಿದರು ಈ ಹಿನ್ನೆಲೆಯಲ್ಲಿ ಕಸಾಪ ಜರ್ಮನ್ನಲ್ಲಿರುವ ಕಿಟಲ್‌ರ ಮರಿ ಮಕ್ಕಳನ್ನ ಸಂಪರ್ಕಿಸಿತ್ತು. ಅಲ್ಲದೆ ಹಾವೇರಿಯಲ್ಲಿ ನಡೆಯಲಿರುವ 86 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಪ್ರಮುಖ ಅತಿಥಿಯಾಗಿ ಆಗಮಿಸುವಂತೆ ಆಹ್ವಾನ ನೀಡಲಾಗಿತ್ತು. ಅದರಂತೆ ನವೆಂಬರ್ ತಿಂಗಳಲ್ಲಿ ಸಾಹಿತ್ಯ ಸಮ್ಮೇಳನ ನಿಗದಿಯಾಗಿದ್ದರಿಂದ ಕಿಟಲ್ ಮರಿಮೊಮ್ಮಗಳು ಆಲ್ಮಥ್ ಮತ್ತು ಅವರ ಮಗ ಫ್ಯಾಟ್ರಿಕ್ ಅವರು ನವೆಂಬರ್ ತಿಂಗಳಿನಲ್ಲಿ ರಾಜ್ಯಕ್ಕೆ ಆಗಮಿಸಿದ್ದಾರೆ.
ಹಾವೇರಿಗೆ ಆಗಮಿಸಿದ ಆಲ್ಮಥ್ ಮತ್ತು ಅವರ ಮಗ ಫ್ಯಾಟ್ರಿಕ್‌ಗೆ ಹಾವೇರಿಯ ಗುರುಕೃಪಾ ಚರ್ಚ್ನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಶೇಷ ಅತಿಥಿಗಳಿಗೆ ಹಾವೇರಿ ಸಾಹಿತಿಗಳು ಸನ್ಮಾನಿಸಿದರು. ಸನ್ಮಾನದ ನಂತರ ಮಾತನಾಡಿದ ಅವರು ಜನರ ಆತಿಥ್ಯಕ್ಕೆ ಸಂತಸ ವ್ಯಕ್ತಪಡಿಸಿದರು. ಕರ್ನಾಟಕ ಸುಂದರ ರಾಜ್ಯಗಳಲ್ಲಿ ಒಂದಾಗಿದ್ದು, ಇಲ್ಲಿಯ ಜನರ ಪ್ರೀತಿಗೆ ಆಭಾರಿಯಾಗಿರುವುದಾಗಿ ಆಲ್ಮಥ್ ಮತ್ತು ಫ್ಯಾಟ್ರಿಕ್ ತಿಳಿಸಿದರು.
ಸಾಹಿತ್ಯ ಸಮ್ಮೇಳನ ಸೇರಿದಂತೆ ರಾಜ್ಯದ ವಿವಿದೆಡೆ ನವೆಂಬರ್ ತಿಂಗಳಿನಲ್ಲಿ ಪ್ರವಾಸ ನಿಗದಿಯಾಗಿತ್ತು. ಹೀಗಾಗಿ ನವೆಂಬರ್ ತಿಂಗಳಿನಲ್ಲಿ ಕರ್ನಾಟಕಕ್ಕೆ ಬಂದಿದ್ದೇವೆ. 10 ದಿನಗಳ ಕಾಲ ಧಾರವಾಡ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದೇವೆ. ನಂತರ ಜರ್ಮನ್‌ಗೆ ತಾವು ಮರಳುತ್ತೇವೆ. ಸಾಹಿತ್ಯ ಸಮ್ಮೇಳನಕ್ಕೆ ಸಾಧ್ಯವಾದರೆ ನಾವು ಇಲ್ಲದಿದ್ದರೆ ನಮ್ಮ ಸಂಬಂಧಿಕರನ್ನು ಕಳುಹಿಸಿಕೊಡುವ ಇಂಗಿತವನ್ನು ಆಲ್ಮಥ್ ಅವರು ವ್ಯಕ್ತಪಡಿಸಿದರು.
ಓದಿ:ಹಾವೇರಿ: 86ನೇ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ