ರಾಣೆಬೆನ್ನೂರು :ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ಈಗ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಡಾ.ಬಸವರಾಜ ಕೇಲಗಾರ ಬೆಂಬಲಿಗರು ಇವತ್ತು ಬಿಜೆಪಿ ಟಿಕೆಟ್ ಸಿಗದ್ದಕ್ಕೆ ಪ್ರತಿಭಟನೆ ನಡೆಸಿದರು.
ರಾಣೆಬೆನ್ನೂರಿನಲ್ಲಿ ಬಿಜೆಪಿಗೆ ಬಂಡಾಯದ ಬಿಸಿ.. ಟೈರ್‌ಗೆ ಬೆಂಕಿ ಹಚ್ಚಿ ಕೇಲಗಾರ ಬೆಂಬಲಿಗರ ಪ್ರತಿಭಟನೆ! - ಬಿಜೆಪಿ ಟಿಕೆಟ್ ಹಂಚಿಕೆ
ಈ ಬಾರಿ ಬಿಜೆಪಿ ರಾಣೆಬೆನ್ನೂರು ಕ್ಷೇತ್ರದಲ್ಲಿ ಡಾ.ಬಸವರಾಜ ಕೇಲಗಾರ ಅವರಿಗೆ ಟಿಕೆಟ್ ನೀಡದೆ ಮೋಸ ಮಾಡಿದೆ ಎಂದು ಆರೋಪಿಸಿ ಇಂದು ಕೇಲಗಾರ ಬೆಂಬಲಿಗರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು.

ನಗರದ ಬಿಜೆಪಿ ಕಚೇರಿಗೆ ಬಂದ ನೂರಾರು ಬೆಂಬಲಿಗರು ಟೈರ್‌ಗೆ ಬೆಂಕಿ ಹಚ್ಚಿ ಬಿಜೆಪಿ ಪಕ್ಷ ಹಾಗೂ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಡಾ.ಬಸವರಾಜ ಕೇಲಗಾರ ನೇಕಾರ ಸಮುದಾಯದ ಪ್ರಭಾವಿ ನಾಯಕರು. 2018ರ ವಿಧಾನಸಭಾ ಚುನಾವಣೆಯಲ್ಲಿ 50 ಸಾವಿರ ಮತಗಳಿಸಿದ್ದರು. ಆದರೆ, ವಿಧಾನಸಭಾ ಉಪಚುನಾವಣೆಯಲ್ಲಿ ಹಿಂದುಳಿದ ನಾಯಕನಿಗೆ ಟಿಕೆಟ್ ನೀಡದೆ, ಬಿಜೆಪಿ ಮಹಾಮೋಸ ಮಾಡಿದೆ. ಬಿ.ಎಸ್.ಯಡಿಯೂರಪ್ಪ ಜಾತಿ ಕೋಡ್ ಬಳಸಿ ರಾಣೆಬೆನ್ನೂರು ಕ್ಷೇತ್ರಕ್ಕೆ ಟಿಕೆಟ್ ನೀಡಿದ್ದಾರೆ ಎಂಬುದು ಸತ್ಯವಾಗಿದೆ ಎಂದು ಕಿಡಿಕಾರಿದ ಕಾರ್ಯಕರ್ತರು, ಬಿಜೆಪಿ ನಾಯಕರ ಜೊತೆ ವಾಗ್ವಾದ ನಡೆಸಿದರು.
24 ಗಂಟೆ ಒಳಗೆ ಟಿಕೆಟ್ ಬದಲಾಯಿಸಿ :
ಇನ್ನು, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ ಅವರಿಗೆ ಘೇರಾವ್ ಹಾಕಿದ್ದು, 24 ಗಂಟೆಯೊಳಗೆ ಅಭ್ಯರ್ಥಿ ಬದಲಾವಣೆ ಮಾಡಬೇಕು. ಇಲ್ಲವಾದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತವೆ ಎಂದು ಎಚ್ಚರಿಸಿದರು.