ಹಾವೇರಿ:ಆತ್ಮಹತ್ಯೆ ಮಾಡಿಕೊಂಡ ರೈತರೊಬ್ಬರ ಕುರಿತು ಹಗುರವಾಗಿ ಮಾತನಾಡಿದ್ದಾರೆ ಎಂಬ ಆರೋಪ ವಿಧಾನಸಭೆ ಮಾಜಿ ಅಧ್ಯಕ್ಷ ಕೆ ಬಿ ಕೋಳಿವಾಡ ವಿರುದ್ಧ ಕೇಳಿ ಬಂದಿದೆ. ಪಕ್ಷ ಸಂಘಟನೆ ಮಾಡಲು ಮುಖಂಡರೊಬ್ಬರ ಮನೆಯಲ್ಲಿ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತಿದ್ದಾಗ ಕಾರ್ಯಕರ್ತರ ಮುಂದೆ ಮಾತನಾಡಿದ ಕೋಳಿವಾಡ, ರೈತನ ಕುರಿತು ವ್ಯಂಗ್ಯವಾಡಿದ್ದಾರೆ ಎನ್ನಲಾಗುತ್ತಿದೆ.
ವಿಡಿಯೋದಲ್ಲೇನಿದೆ? ಕೋಳಿವಾಡ ಅವರು ಬೆಂಬಲಿಗರ ಜೊತೆ ಮಾತನಾಡುತ್ತಿರುವಾಗ ಫೋನ್ ಕರೆ ಬರುತ್ತದೆ. ಈ ಸಂದರ್ಭದಲ್ಲಿ ಮೃತ ರೈತನಿಗೆ ಹೂಮಾಲೆ ಹಾಕಲು ಬರುವಂತೆ ಕರೆ ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತ ಕೇಳಿದ್ದಾರೆ. ಮೊಬೈಲ್ನಲ್ಲಿ ಮಾತನಾಡಿದ ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ಹಗುರ ಪದಗಳನ್ನು ಬಳಸಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.