ಕರ್ನಾಟಕ

karnataka

ETV Bharat / state

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ ನಿಗದಿ​.. ಕಸಾಪ ಅಧ್ಯಕ್ಷರಿಗೆ ಕೊರೊನಾ ದೃಢ - ಕಸಾಪ ಸಭೆ

ಹಾವೇರಿ ಜಿಲ್ಲೆಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಪರ್ಕ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Kn_hvr_02_sammelana_joshi_7202143
ಡಾ.ಮಹೇಶ ಜೋಶಿ

By

Published : Aug 6, 2022, 11:01 PM IST

ಹಾವೇರಿ:ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದಕ್ಕೂ ಮುನ್ನ ನಗರದ ವಾರ್ತಾ ಭವನದಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಪರ್ಕ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು. ತಮ್ಮ ಸಂಪರ್ಕಕ್ಕೆ ಬಂದವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಇದಕ್ಕೂ ಮುಂಚಿತವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಪರ್ಕ ಕಚೇರಿ ಉದ್ಘಾಟನೆ ಮಾಡಿ ನಾತನಾಡಿದ್ದ ಅವರು, ಜಿಲ್ಲೆಯಲ್ಲಿ ನವೆಂಬರ್ 11,12 ಮತ್ತು 13 ರಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅಧಿಕೃತವಾಗಿ ದಿನಾಂಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಈ ವಾರದಲ್ಲಿ ಪ್ರಕಟಿಸಲಿದ್ದಾರೆ.

ಹಾವೇರಿ ಸಾಹಿತ್ಯ ಸಮ್ಮೇಳನ ಬಗ್ಗೆ ಯಾವುದೇ ಆತಂಕ ಮತ್ತು ಸಂಶಯವಿರಬಾರದು. ಕಸಾಪ ಇತಿಹಾಸದಲ್ಲಿ 107 ವರ್ಷಗಳಲ್ಲಿ ಯಾವ ಅಧ್ಯಕ್ಷರಿಗೆ ಸಹ ಸಚಿವ ಸ್ಥಾನಮಾನ ಸಿಕ್ಕಿರಲಿಲ್ಲಾ. ಮೊದಲ ಬಾರಿಗೆ ಸರ್ಕಾರ ಕಸಾಪ ರಾಜ್ಯಾಧ್ಯಕ್ಷರಿಗೆ ಈಸ್ಥಾನ ಮಾನ ನೀಡಿದೆ. ಇದರಿಂದಲೇ ಗೊತ್ತಾಗುತ್ತೆ ಸರ್ಕಾರಕ್ಕೆ ಕಸಾಪ ಬಗ್ಗೆ ಎಷ್ಟು ಗೌರವ ಇದೆ ಎಂದು.

ಸರ್ಕಾರದ ಈ ಗೌರವ ನನಗೆ ಇನ್ನು ಹೆಚ್ಚು ಆನೆಬಲ ಮತ್ತು ಭೀಮಬಲ ತಂದಿದೆ. ಸರ್ಕಾರ ಕಸಾಪ ಜೊತೆ ಇದೆ ಕಸಾಪ ಸರ್ಕಾರದ ಜೊತೆ ಇದೆ. ಇವೆರಡು ಕನ್ನಡ ಕನ್ನಡಿಗ ಕರ್ನಾಟಕ ಸೇವೆ ಮಾಡುತ್ತೀವೆ. ಸಮ್ಮೇಳನಕ್ಕೆ ಇನ್ನು ಮೂರು ತಿಂಗಳು ಬಾಕಿ ಇದ್ದು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗುವದು ಎಂದು ಜೋಶಿ ತಿಳಿಸಿದರು.

ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳ ಬಿಡುಗಡೆ:ಸಾಹಿತ್ಯ ಸಮ್ಮೇಳನದಲ್ಲಿ 84 ಪುಸ್ತಕಗಳ ಬಿಡುಗಡೆ ಮಾಡಲಾಗುತ್ತದೆ ಅದರಲ್ಲಿ 37 ಪುಸ್ತಕಗಳು ಹಾವೇರಿ ಜಿಲ್ಲೆಗೆ ಸಂಬಂಧಿಸಿದಾಗಿರುತ್ತವೆ. 84 ಪುಸ್ತಕಗಳ ಪ್ರತಿಪುಸ್ತಕದ ಪುಟಗಳ ಸಂಖ್ಯೆ 80 ಇರುತ್ತೆ ಎಂದು ಜೋಶಿ ತಿಳಿಸಿದರು. ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪುಸ್ತಕಗಳ ಮಾರಾಟ ಮಳಿಗೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವದು. ಸಮ್ಮೇಳನದಲ್ಲಿ ಸಮಯಪ್ರಜ್ಞೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಈ ಸಮ್ಮೇಳನ ವಿಶಿಷ್ಠ ವಿಭಿನ್ನ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಗುವದು. ಪ್ರಮುಖವಾಗಿ ದೂಳು ಮುಕ್ತ ಮತ್ತು ಪ್ಲಾಸ್ಟಿಕ್ ಮುಕ್ತ ಸಮ್ಮೇಳನ ಆಯೋಜಿಸಲಾಗುತ್ತದೆ. ಕನ್ನಡದಲ್ಲಿ ಪ್ರಥಮ ಬಾರೆಗೆ ನಿಘಂಟು ರಚಿಸಿದವರು ಕಿಟಲ್ ಅವರ ಮೊಮ್ಮಗಳು ಸಮ್ಮೇಳನದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ಕೆನಡಾ ಸಂಸತ್ತಿನಲ್ಲಿ ಕನ್ನಡದ ಕಂಪು ಬೀರಿದ ಚಂದ ಆರ್ಯ ಸಹ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ.ಮಹೇಶ್ ಜೋಶಿ ತಿಳಿಸಿದರು.

ಇದನ್ನೂ ಓದಿ:ಕೇಂದ್ರ ನೀತಿ ಆಯೋಗ ಮಾದರಿಯಲ್ಲಿ ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ ರಚನೆಗೆ ಆದೇಶ

ABOUT THE AUTHOR

...view details