ಕರ್ನಾಟಕ

karnataka

ETV Bharat / state

‘ಮಳೆ, ಬೆಳೆ ಸಂಪಾತಲೇ ಪರಾಕ್’... ಕಾರ್ಣಿಕ ನುಡಿದ ಆಡೂರು ಗೊರವಯ್ಯ - ಹಾವೇರಿ ಕಾರ್ಣಿಕೋತ್ಸವ ಸುದ್ದಿ,

ಮಳೆ, ಬೆಳೆ ಸಂಪಾತಲೇ ಪರಾಕ್ ಎಂದು ಆಡೂರು ಗೊರವಯ್ಯ ಕಾರ್ಣಿಕ ನುಡಿದರು.

Karnika fest, Karnika fest celebration, Karnika fest celebration in Haveri, Haveri Karnika fest, Haveri Karnika fest news, ಕಾರ್ಣಿಕೋತ್ಸವ, ಹಾವೇರಿಯಲ್ಲಿ ಕಾರ್ಣಿಕೋತ್ಸವ, ಹಾವೇರಿಯಲ್ಲಿ ಕಾರ್ಣಿಕೋತ್ಸವ ಆಚರಣೆ, ಹಾವೇರಿ ಕಾರ್ಣಿಕೋತ್ಸವ, ಹಾವೇರಿ ಕಾರ್ಣಿಕೋತ್ಸವ ಸುದ್ದಿ,
ಕಾರ್ಣಿಕ ನುಡಿದ ಆಡೂರು ಗೊರವಯ್ಯ

By

Published : Feb 27, 2021, 11:55 PM IST

ಹಾವೇರಿ: ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ ಮಾಲತೇಶ ದೇವರ ಕಾರ್ಣಿಕೋತ್ಸವ ಭರ್ಜರಿಯಿಂದ ನಡೆಯಿತು.

ಪ್ರತಿವರ್ಷ ಭಾರತ ಹುಣ್ಣಿಮೆ ದಿನ ನಡೆಯುವ ಕಾರ್ಣಿಕವನ್ನ ಭವಿಷ್ಯವಾಣಿ ಎಂದೇ ನಂಬಲಾಗುತ್ತದೆ. ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ಬರುವ ಗೊರವಯ್ಯ ಬಿಲ್ಲನ್ನೇರಿ ಕಾರ್ಣಿಕ ನುಡಿಯುತ್ತಾರೆ.

ಕಾರ್ಣಿಕ ನುಡಿದ ಆಡೂರು ಗೊರವಯ್ಯ

ಗೊರವಯ್ಯ ಹನುಮಗೌಡ ಗೋರೇಗೌಡ ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ಇಡೀ ವಾತಾವರಣ ಶಾಂತವಾಯ್ತು. ಆಗ ಮಳೆ, ಬೆಳೆ ಸಂಪಾತಲೇ ಪರಾಕ್ ಅಂದವರೆ ಗೊರವಯ್ಯ ಬಿಲ್ಲಿನಿಂದ ಕೆಳಕ್ಕೆ ಬಿದ್ದರು.

ಗೊರವಯ್ಯನ ಕಾರ್ಣಿಕ ವಾಣಿ ಕೇಳಿದ ಸುತ್ತಮುತ್ತಲಿನ ಗ್ರಾಮಗಳ ಜನರು ಮನೆಯತ್ತ ಹೆಜ್ಜೆ ಹಾಕಿದರು. ಭಾರತ ಹುಣ್ಣಿಮೆ ಸೇರಿದಂತೆ ವರ್ಷಕ್ಕೆರಡು ಬಾರಿ ಆಡೂರಲ್ಲಿ ಮಾಲತೇಶ ದೇವರ ಕಾರ್ಣಿಕೋತ್ಸವ ನಡೆಯುತ್ತದೆ. ಕಾರ್ಣಿಕದ ಆಧಾರದ ಮೇಲೆ ಸುತ್ತಮುತ್ತಲಿನ ಗ್ರಾಮಗಳ ರೈತರು ಮುಂಗಾರು ಮತ್ತು ಹಿಂಗಾರು ಬೆಳೆಯನ್ನ ನಿರ್ಧರಿಸ್ತಾರೆ‌.

ABOUT THE AUTHOR

...view details