ಹಾವೇರಿ: ರಾಣೆಬೆನ್ನೂರಿನಲ್ಲಿ ಜ.17 ರಿಂದ 19 ರವರೆಗೆ ಕರ್ನಾಟಕ ವೈಭವ ವೈಚಾರಿಕ ಹಬ್ಬ ಎಂಬ ಶೀರ್ಷಿಕೆ ಅಡಿಯಲ್ಲಿ ಕನ್ನಡ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೃಹತ್ ವೇದಿಕೆ ಸಿದ್ದಪಡಿಸಲಾಗುತ್ತಿದೆ.
ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ, ರಾಣೆಬೆನ್ನೂರು ಪರಿವರ್ತನಾ ರಾಷ್ಟ್ರವಾದಿ ಚಿಂತಕರ ವೇದಿಕೆ ಹಾಗೂ ರಾಜ್ಯದ ಪ್ರತಿಷ್ಠಿತ 7 ವಿಶ್ವವಿದ್ಯಾಲಯಗಳ ಸಂಯೋಜನೆಯಲ್ಲಿ ಕರ್ನಾಟಕ ವೈಭವ ಹಬ್ಬವನ್ನು ಆಯೋಜಿಸಲಾಗಿದೆ.
ಕರ್ನಾಟಕ ವೈಚಾರಿಕ ಹಬ್ಬಕ್ಕೆ ಕ್ಷಣಗಣನೆ ಕಾರ್ಯಕ್ರದಲ್ಲಿ ಕನ್ನಡ ನಾಡ-ನುಡಿ, ನೆಲ-ಜಲ, ಕನ್ನಡ ಸಂಸ್ಕೃತಿಯನ್ನು ನಾಡಿನಾದ್ಯಂತ ಬಿಂಬಿಸುವುದು, ಸಿಎಂ ಯಡಿಯೂರಪ್ಪ ಸೇರಿದಂತೆ ಸರ್ಕಾರದ ಸಚಿವರುಗಳು ಹಾಗೂ ಸುಮಾರು 19 ವಿಶ್ವವಿದ್ಯಾಲಯಗಳ ಕುಲಪತಿಗಳು ಭಾಗಿಯಾಗಲಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ದಾಸವಾಣಿ, ಕನ್ನಡ ಭಾಷೆ ಸಾಹಿತ್ಯ, ಕರ್ನಾಟಕದ ರಾಜಮನೆತನಗಳ ಹಿನ್ನೆಲೆ, ಕಲಾ ವೈಭವ, ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ ಪಾತ್ರ, ಯುವ ಗೋಷ್ಠಿ, ಕವಿ ಗೋಷ್ಠಿ, ಮಹಿಳಾ ಗೋಷ್ಠಿ ಸೇರಿದಂತೆ ಇತರೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಹಾಗೂ ಉಪನ್ಯಾಸ ನಡೆಯಲಿವೆ ಎಂದು ಕಾರ್ಯಕ್ರಮದ ಸಂಚಾಲಕ ಡಾ.ನಾರಾಯಣ ಪವಾರ ತಿಳಿಸಿದ್ದಾರೆ.