ಕರ್ನಾಟಕ

karnataka

ETV Bharat / state

ಭುವನೇಶ್ವರಿ ದೇವಸ್ಥಾನ ನಿರ್ಮಿಸಲು ಮುಂದಾದ ಕನ್ನಡ ನಾಡು ಹಿತರಕ್ಷಣಾ ಸಮಿತಿ - ರಾಜ್ಯಾಧ್ಯಕ್ಷ ಕೆ ವಿ ಕೃಷ್ಣಮೂರ್ತಿ

ವಿಶ್ವದಲ್ಲಿ ಭಾಷೆಗೆ ದೇವರಿರುವುದು ಕನ್ನಡಕ್ಕೆ ಮಾತ್ರ ಎಂದು ಕನ್ನಡ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷೆ ಗೀತಾ ಅವರು ತಿಳಿಸಿದ್ದಾರೆ.

ಭುವನೇಶ್ವರಿ ದೇವಿಯ ರಥಯಾತ್ರೆ
ಭುವನೇಶ್ವರಿ ದೇವಿಯ ರಥಯಾತ್ರೆ

By

Published : May 19, 2023, 10:07 PM IST

ರಾಜ್ಯಾಧ್ಯಕ್ಷ ಕೆ ವಿ ಕೃಷ್ಣಮೂರ್ತಿ

ಹಾವೇರಿ:ಕನ್ನಡ ನಾಡು ಹಿತರಕ್ಷಣಾ ಸಮಿತಿ ಬೆಂಗಳೂರಿನಲ್ಲಿ ಭುವನೇಶ್ವರಿಯ ದೇವಸ್ಥಾನ ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ರಾಜ್ಯದೆಲ್ಲೆಡೆ ಭುವನೇಶ್ವರಿ ದೇವಿಯ ರಥಯಾತ್ರೆ ನಡೆಸುತ್ತಿದೆ. ರಥದಲ್ಲಿ ಭುವನೇಶ್ವರಿ ದೇವಿಯ ಪ್ರತಿಮೆ ನಿರ್ಮಿಸಲಾಗಿದೆ. ಜೊತೆಗೆ ಜ್ಯೋತಿಯಾತ್ರೆ ಸಹ ನಡೆಸುತ್ತಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಚಂದ್ರಶೇಖರ ಕಂಬಾರ ಮತ್ತು 86 ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ದೊಡ್ಡರಂಗೇಗೌಡ ಈ ರಥಯಾತ್ರೆಗೆ ಚಾಲನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಆರಂಭವಾಗಿರುವ ಈ ರಥಯಾತ್ರೆ ರಾಜ್ಯದ ಸುಮಾರು 10 ಜಿಲ್ಲೆಗಳಲ್ಲಿ ಸಂಚರಿಸಿ ಹಾವೇರಿ ಜಿಲ್ಲೆಗೆ ಆಗಮಿಸಿತು. ಹಾವೇರಿಯ ಆಟೋ ಚಾಲಕರ ಸಂಘ ಈ ರಥಯಾತ್ರೆಯನ್ನು ಅದ್ದೂರಿಯಾಗಿ ಬರಮಾಡಿಕೊಂಡಿತು. ನಂತರ ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನದಿಂದ ರಥಯಾತ್ರೆ ಮೆರವಣಿಗೆ ನಡೆಸಲಾಯಿತು.

ಕನ್ನಡ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷೆ ಗೀತಾ

ಭುವನೇಶ್ವರಿದೇವಿಯ ದೇವಸ್ಥಾನ: ಈ ಸಂದರ್ಭದಲ್ಲಿ ಮಾತನಾಡಿದ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷೆ ಗೀತಾ, ವಿಶ್ವದಲ್ಲಿ ಭಾಷೆಗೆ ದೇವರಿರುವುದು ಅದು ಕನ್ನಡಕ್ಕೆ ಮಾತ್ರ. ಬೇರೆ ಯಾವ ಭಾಷೆಗೆ ಸಹ ದೇವರಿಲ್ಲ. ಕನ್ನಡಕ್ಕೆ ಸಿದ್ದಾಪುರ ಬಳಿಯ ಭುವನಗಿರಿಯಲ್ಲಿ ಕನ್ನಡಾಂಬೆ ದೇವಸ್ಥಾನ ನಿರ್ಮಿಸಲಾಗಿದೆ. ಅದರಂತೆ ಹಂಪಿಯಲ್ಲಿ ಬಿಟ್ಟರೆ ಬೇರೆ ಎಲ್ಲಿಯೂ ಸಹ ಕನ್ನಡಾಂಬೆಯ ದೇವಸ್ಥಾನವಿಲ್ಲ. ಈ ಹಿನ್ನೆಲೆಯಲ್ಲಿ ಹಿತರಕ್ಷಣಾ ಸಮಿತಿ ಬೆಂಗಳೂರಿನಲ್ಲಿ ತಾಯಿ ಭುವನೇಶ್ವರಿದೇವಿಯ ದೇವಸ್ಥಾನ ನಿರ್ಮಿಸಲು ಮುಂದಾಗಿದೆ.

ಶಾಲೆ ಶಾಲೆಗಳಿಗೆ ತೆರಳಿ ಜಾಗೃತಿ: ಕೇವಲ ಹಾಡುಗಳಲ್ಲಿ ಭುವನೇಶ್ವರಿಯ ಸ್ತುತಿ ಮಾಡಲಾಗುತ್ತದೆ. ಆದರೆ, ಭುವನೇಶ್ವರಿಗೆ ನಿತ್ಯ ಪೂಜೆ ಅಭಿಷೇಕ ಸೇರಿದಂತೆ ವಿವಿಧ ಕಾರ್ಯಗಳು ನಡೆಯಬೇಕು. ಅಷ್ಟೇ ಅಲ್ಲ ಪ್ರತಿವರ್ಷ ನವಂಬರ್ ಒಂದರಂದು ದೇವಿಯ ಜಾತ್ರೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭುವನೇಶ್ವರಿ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಎಷ್ಟು ವಿಚಿತ್ರ ಅಂದರೆ ರಾಜ್ಯದ ಕೆಲ ಪ್ರದೇಶಗಳಲ್ಲಿ ಭುವನೇಶ್ವರಿ ಮೂರ್ತಿಯ ಬಗ್ಗೆ ಮಕ್ಕಳಿಗೆ ತಿಳಿವಳಿಕೆಯಿಲ್ಲ. ಶಾಲೆ ಶಾಲೆಗಳಿಗೆ ತೆರಳಿ ಈ ಕುರಿತಂತೆ ಮಕ್ಕಳಿಗೆ ಜಾಗೃತಿ ಮೂಡಿಸಬೇಕಿದೆ. ಬೆಂಗಳೂರಿನಲ್ಲಿ ಮಾತ್ರ ಅಲ್ಲ ಪ್ರತಿ ಜಿಲ್ಲಾಕೇಂದ್ರದಲ್ಲಿ ಒಂದೊಂದು ಭುವನೇಶ್ವರಿದೇವಿಯ ದೇವಸ್ಥಾನ ನಿರ್ಮಾಣ ಮಾಡಬೇಕು ಎನ್ನುವ ಇಂಗಿತವನ್ನ ಗೀತಾ ವ್ಯಕ್ತಪಡಿಸಿದರು.

ಇದನ್ನೂ ಓದಿ:ಶ್ರಮಿಕ ವರ್ಗಕ್ಕೆ ಕೊಟ್ಟಿದ್ದ ಉಚಿತ ಬಸ್ ಪಾಸ್ ಸ್ಥಗಿತ: ಹೊಸ ಸರ್ಕಾರದ ಗ್ಯಾರಂಟಿಗಳ ಜಾರಿಗೆ ಕಾದು ಕುಳಿತ ಕಾರ್ಮಿಕರು

ಬೆಂಗಳೂರಿನಲ್ಲಿ ರಥಯಾತ್ರೆ ಮುಕ್ತಾಯ: ಇನ್ನು ಈ ಕುರಿತಂತೆ ಮಾತನಾಡಿದ ರಾಜ್ಯಾಧ್ಯಕ್ಷ ಕೆ ವಿ ಕೃಷ್ಣಮೂರ್ತಿ, ಭುವನೇಶ್ವರಿ ದೇವಿ ಜ್ಯೋತಿರಥಯಾತ್ರೆಗೆ ಗಣ್ಯರಿಂದ ಆರಂಭವಾಗಿದೆ. ಇದು ಎಷ್ಟೇ ಸಮಸ್ಯೆಗಳು ಬಂದರು ನಿಲ್ಲುವುದಿಲ್ಲ. ಈಗಾಗಲೇ ರಾಜ್ಯದ 11 ಜಿಲ್ಲೆಗಳಲ್ಲಿ ಸಂಚರಿಸಿದ್ದೇವೆ. ಉಳಿದ ಜಿಲ್ಲೆಗಳಲ್ಲಿ ಸಂಚರಿಸಿ 108 ದಿನಗಳ ಕಾಲ ಪಯಣ ನಡೆಸಲಿದ್ದೇವೆ. ನಂತರ ಬೆಂಗಳೂರಿನಲ್ಲಿ ರಥಯಾತ್ರೆ ಮುಕ್ತಾಯಗೊಳ್ಳಲಿದ್ದು, ಇಲ್ಲಿ ಸಂಗ್ರಹವಾಗಿರುವ ಹಣದಿಂದ ದೇವಸ್ಥಾನ ನಿರ್ಮಿಸುತ್ತೇವೆ. ಪ್ರತಿ ಜಿಲ್ಲೆ ಪ್ರತಿ ಕನ್ನಡಗನಿಗೆ ಸಹ ಭುವನೇಶ್ವರಿ ದೇವಿಯ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ :ಬಿಸಿಲು ಲೆಕ್ಕಿಸದೇ ದುಡಿದ್ರೂ‌ ಕೂಲಿ ಹಣ ನೀಡ್ತಿಲ್ಲ: ಅಧಿಕಾರಿಗಳ ವಿರುದ್ಧ ಉದ್ಯೋಗ ಖಾತ್ರಿ ಕಾರ್ಮಿಕರ ಆರೋಪ

ABOUT THE AUTHOR

...view details