ಹಾವೇರಿ: ಕಳೆದ ಹಲವು ವರ್ಷಗಳಿಂದ ಮಲೀನಗೊಂಡಿದ್ದ ರಟ್ಟಿಹಳ್ಳಿ ತಾಲೂಕಿನ ಕಣವಿಸಿದ್ದಗೇರಿ ಸಣ್ಣ ಗ್ರಾಮದ ಕೆರೆಯನ್ನ ಗ್ರಾಮ ಪಂಚಾಯತ್‌ಗೆ ಆಯ್ಕೆಯಾದ ನಾಲ್ಕು ಯುವ ಸದಸ್ಯರು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸ್ವಚ್ಛಗೊಳಿಸಿದ್ದಾರೆ.
ಕಣವಿಸಿದ್ದಗೇರಿ ಸಣ್ಣ ಗ್ರಾಮದಲ್ಲಿ ಒಂದು ಎಕರೆ ವಿಸ್ತೀರ್ಣದ ಕೆರೆ ಕಳೆದ ಹಲವು ವರ್ಷಗಳಿಂದ ಮಲೀನಗೊಂಡಿತ್ತು. ಈ ಕುರಿತು ಗ್ರಾಮ ಪಂಚಾಯತ್‌ಗೆ ಆಯ್ಕೆಯಾದ ನಾಲ್ಕು ಯುವ ಸದಸ್ಯರು, ಪಿಡಿಒ, ನರೇಗಾ ಸಂಯೋಜಕರು ಮತ್ತು ಜಿಲ್ಲಾ ಪಂಚಾಯತ್ ಸಿಇಒ ಮಾರ್ಗದರ್ಶನದಲ್ಲಿ ಕೆರೆ ಸೌಂದರ್ಯಕ್ಕೆ ಒತ್ತು ಕೊಟ್ಟಿದ್ದಾರೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 9 ಲಕ್ಷ ರೂ. ಉಪಯೋಗಿಸಿ ಕೆರೆಯನ್ನ ಸುಂದರ ತಾಣವಾಗಿ ಮಾಡಿದ್ದಾರೆ.