ಹಾವೇರಿ: ಕರ್ನಾಟಕದ ಕುರುಬರು ಒಗ್ಗಟ್ಟಾಗಿ ಹೆಜ್ಜೆ ಹಾಕಿದರೇ ಎಸ್ಟಿ ಸಿಕ್ಕಿತಲೇ ಪರಾಕ್ ಎಂದು ಕಾಗಿನೆಲೆ ಶ್ರೀಗಳು ಕಾರ್ಣಿಕ ನುಡಿದಿದ್ದಾರೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಎಸ್ಟಿ ಹೋರಾಟ ಪಾದಯಾತ್ರೆಯ ಉದ್ಘಾಟಿಸಿ ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಮೈಲಾರದ ಗೊರವಪ್ಪ ಕಾರ್ಣಿಕ ನುಡಿದ ಸಂಗತಿ ನಿಜವಾಗಿದೆ. ಅದರಂತೆ ಕನಕಗುರುಪೀಠದ ಕಾಗಿನೆಲೆ ಶ್ರೀಗಳು ಕಾರ್ಣಿಕ ನುಡಿಯುತ್ತಿದ್ದು ಇದು ನಿಜವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುರುಬ ಜನಾಂಗಕ್ಕೆ ಎಸ್ಟಿ ಮೀಸಲಾತಿಗೆ ಆಗ್ರಹಿಸಿದ ಕಾಗಿನೆಲೆ ಶ್ರೀ ಬೆಂಗಳೂರಲ್ಲಿ ಫೆಬ್ರುವರಿ 7ರಂದು ನಡೆಯುವ ಸಮಾವೇಶದಲ್ಲಿ 10 ಲಕ್ಷ ಕುರುಬರು ಸೇರುತ್ತಾರೆ. ಕೇಂದ್ರ ಸರ್ಕಾರ ನಮ್ಮ ಕಡೆ ತಿರುಗಿ ನೋಡಿ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕುರಿಗಳು ಸರಿಯಾಗಿ ನಡೆಯುತ್ತಿರುತ್ತವೆ. ಆದರೆ ಅವುಗಳ ದಾರಿಯನ್ನು ಮೇಕೆಗಳು ತಪ್ಪಿಸುತ್ತವೆ. ಆದರೆ ಈ ಬಾರಿ ಆ ರೀತಿಯಾಗಲು ಬಿಡುವುದಿಲ್ಲ. ಕುರಿಗಳ ಹಿಂಡಿಗೆ ಮುಂದೆ ನಾನಿದ್ದು, ಹಿಂದೆ ಈಶ್ವರಾನಂದ ಪುರಿಶ್ರೀಗಳು ಇರುತ್ತಾರೆ. ಹೀಗಾಗಿ ಕುರಿಗಳು ದಾರಿ ತಪ್ಪುವುದಿಲ್ಲ. ಎಸ್ಟಿ ಹೋರಾಟದಲ್ಲಿ ಯಶಸ್ಸು ತಮಗೆ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಇದನ್ನೂ ಓದಿ:ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿಗಾಗಿ ಕಾಗಿನೆಲೆ ಶ್ರೀ ಪಾದಯಾತ್ರೆ