ಕರ್ನಾಟಕ

karnataka

ETV Bharat / state

ಇಂದು ದಾಶ ಶ್ರೇಷ್ಠ ಕನಕದಾಸರ ಜಯಂತಿ.. ದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತ.. - ಕನಕದಾಸರ ಕೃತಿಗಳು ಇಂದಿಗೂ ಪ್ರಸ್ತುತ

ಅವರು ರಚಿಸಿದ ಕೃತಿಗಳು ಅಂದು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಲ್ಲದೆ ಪ್ರಸ್ತುತ ದಿನಗಳಲ್ಲಿ ಸಹ ಸಮಾಜದ ಅಂಕುಡೊಂಕು ತಿದ್ದುತ್ತಿವೆ. ಕ್ರಿ.ಶ 1509ರಲ್ಲಿ ಜನಸಿದ ಕನಕದಾಸರು1609ರಲ್ಲಿ ಕಾಗಿನೆಲೆಯಲ್ಲಿ ಮರಣವನ್ನಪ್ಪಿದ್ದರು. ಕಾಗಿನೆಲೆಯಲ್ಲಿ ಕನಕದಾಸರ ಗದ್ದುಗೆ ನಿರ್ಮಿಸಲಾಗಿದೆ..

kanakadasa jayanthi celebration today
ಇಂದು ದಾಶ ಶ್ರೇಷ್ಠ ಕನಕದಾಸರ ಜಯಂತಿ; ದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತ..

By

Published : Nov 22, 2021, 2:49 PM IST

Updated : Nov 22, 2021, 3:19 PM IST

ಹಾವೇರಿ :ಹಲವು ದಾಸಶ್ರೇಷ್ಠರು, ದಾರ್ಶನಿಕರು ಸಂತರು ಜನಿಸಿದ ಜಿಲ್ಲೆ ಹಾವೇರಿ. ಇದೇ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ ಕ್ರಿ.ಶ 1509ರಲ್ಲಿ ದಾಸ ಶ್ರೇಷ್ಠ ಕನಕದಾಸರು ಜನಿಸಿದರು.

ಬಚ್ಚಮ್ಮ ಮತ್ತು ಬೀರಪ್ಪ ದಂಪತಿಯ ಮಗನಾಗಿ ಜನಿಸಿದ ಕನಕದಾಸರ ಮೊದಲ ಹೆಸರು ತಿಮ್ಮಪ್ಪ ನಾಯಕ. ಪ್ರತಿ ವರ್ಷ ಅವರು ಜನಿಸಿದ ತಿಥಿ ನಕ್ಷತ್ರದ ಮೇಲೆ ಕನಕದಾಸರ ಜಯಂತಿ (kanaka dasa jayanthi) ಆಚರಿಸಲಾಗುತ್ತಿದೆ.

ಇಂದು ದಾಶ ಶ್ರೇಷ್ಠ ಕನಕದಾಸರ ಜಯಂತಿ.. ದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತ..

ಇಂದು ರಾಜ್ಯಾದ್ಯಂತ ಕನಕದಾಸರ ಜಯಂತಿ (kanaka dasa jayanthi) ಆಚರಿಸಲಾಗುತ್ತಿದೆ. ವಿಜಯನಗರ ಅರಸರ ಆಡಳಿತದಲ್ಲಿ ದಂಡ ನಾಯಕನಾಗಿದ್ದ ತಿಮ್ಮಪ್ಪನಾಯಕನಿಗೆ ಕನಕ ಸಿಕ್ಕಿದ್ದರಿಂದಾಗಿ ಕನಕನಾಗುತ್ತಾರೆ.

ನಂತರ ಯುದ್ಧದಲ್ಲಿ ಪಾಲ್ಗೊಂಡು ಅಲ್ಲಿ ಕಂಡ ಹಿಂಸೆಯಿಂದ ಕನಕ ಕನಕದಾಸರಾಗಿದ್ದು ಈಗ ಇತಿಹಾಸ. ಕನಕದಾಸರು ಮತ್ತು ಪುರಂದರದಾಸರನ್ನ ಕರ್ನಾಟಕ ಕೀರ್ತನೆ ಸಾಹಿತ್ಯದ ಅಶ್ವಿನಿದೇವತೆಗಳು ಎಂದು ಕರೆಯಲಾಗುತ್ತದೆ. ಸಾಹಿತ್ಯದ ಜೊತೆಗೆ ಸಂಗೀತಕ್ಕೂ ಒತ್ತು ಕೊಟ್ಟ ಸಂತ ಕನಕದಾಸರು.

ಕನಕದಾಸರ ಕೃತಿಗಳು ಇಂದಿಗೂ ಪ್ರಸ್ತುತ :ಕನಕದಾಸರು ನಾಡು ಕಂಡ ಅಪ್ರತಿಮ ದಾಸರು. ದಾಸ ಶ್ರೇಷ್ಠರಲ್ಲಿ ಶ್ರೇಷ್ಠರಾದವರು ಕನಕದಾಸರು. ಇಂತಹ ಕನಕದಾಸರು ಇಂದಿನ ವಿದ್ಯಮಾನಗಳನ್ನ ನಾಲ್ಕು ಶತಮಾನಗಳ ಮುಂಚೆ ತಮ್ಮ ಕೃತಿಗಳಲ್ಲಿ ಪ್ರಸ್ತುತಪಡಿಸಿದ್ದಾರೆ.

ಅವರು ರಚಿಸಿದ ಕೃತಿಗಳು ಅಂದು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಲ್ಲದೆ ಪ್ರಸ್ತುತ ದಿನಗಳಲ್ಲಿ ಸಹ ಸಮಾಜದ ಅಂಕುಡೊಂಕು ತಿದ್ದುತ್ತಿವೆ. ಕ್ರಿ.ಶ 1509ರಲ್ಲಿ ಜನಸಿದ ಕನಕದಾಸರು1609ರಲ್ಲಿ ಕಾಗಿನೆಲೆಯಲ್ಲಿ ಮರಣವನ್ನಪ್ಪಿದ್ದರು. ಕಾಗಿನೆಲೆಯಲ್ಲಿ ಕನಕದಾಸರ ಗದ್ದುಗೆ ನಿರ್ಮಿಸಲಾಗಿದೆ.

ಅಂದು ಕನಕದಾಸರು ರಚಿಸಿದ ನಳಚರಿತ್ರೆ, ಮೋಹನ ತರಂಗಿಣಿ, ರಾಮಧಾನ್ಯ ಚರಿತ ಮತ್ತು ಹರಿಭಕ್ತಿಸಾರ ಕೃತಿಗಳು ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಾಗಿವೆ. ಅವರು ಕಾಗಿನೆಲೆ ಆದಿಕೇಶವನ ಅಂಕಿತನಾಮದಲ್ಲಿ ರಚಿಸದ ಕೀರ್ತನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.

Last Updated : Nov 22, 2021, 3:19 PM IST

ABOUT THE AUTHOR

...view details