ಕರ್ನಾಟಕ

karnataka

ETV Bharat / state

ರಾಜ್ಯಮಟ್ಟದ ಕಬ್ಬಡಿ ಆಟಗಾರ ಪ್ರವೀಣ ಕುದರಿಗೆ ಅಪಘಾತ.. ಚಿಕಿತ್ಸೆಗೆ ಹಣವಿಲ್ಲದೇ ಕುಟುಂಬಸ್ಥರ ಪರದಾಟ - ರಾಜ್ಯ ಮಟ್ಟದ ವಿದ್ಯಾರ್ಥಿ ಒಲಂಪಿಕ್ಸ್

ಈಗಾಗಲೇ ನಗರದ ಹಲವರು ಸಹಾಯ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣಕಾಸು ನೆರವು ಬೇಕಾಗಿದೆ, ದಯಮಾಡಿ ಸಾರ್ವಜನಿಕರು, ರಾಜಕಾರಣಿಗಳು ಸಹಾಯ ಮಾಡಬೇಕು ಎಂದು ಕೋಚ್ ‌ನಿಂಗರಾಜ ಕೋಡಿಹಳ್ಳಿ ಮನವಿ ಮಾಡಿದ್ದಾರೆ..

serious condition
ಕಬ್ಬಡಿ ಆಟಗಾರ ಪ್ರವೀಣ

By

Published : Jun 29, 2020, 9:07 PM IST

ರಾಣೇಬೆನ್ನೂರ :ನಗರದ ಸಾಲಗೇರಿ ಓಣಿಯ ಯುವ ಕ್ರೀಡಾ ಕಬ್ಬಡಿ ಆಟಗಾರ ಪ್ರವೀಣ ಕುದರಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಆದರೆ, ಚಿಕಿತ್ಸೆಗಾಗಿ ಪಾಲಕರು ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣ ಮತ್ತು ಅಕ್ಕಪಕ್ಕದವರ ನೆರವಿಗೆ ಪರದಾಡುತ್ತಿದ್ದಾರೆ.

ರಾಜ್ಯ ಮಟ್ಟದ ವಿದ್ಯಾರ್ಥಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಕಬ್ಬಡಿ ಆಟಗಾರನಾಗಿ ಸಾಧನೆ ಮಾಡಿರುವ ಪ್ರವೀಣ ಕುದರಿ ಈಗ ಜೀವ ಮತ್ತು ಸಾವಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಇವರ ಚಿಕಿತ್ಸೆಗೆ ಸದ್ಯ ಹಣಕಾಸಿನ ತೊಂದರೆಯಾಗಿದ್ದು, ನೆರವಿಗಾಗಿ ಕುಟುಂಬಸ್ಥರು ಪರಿತಪಿಸುತ್ತಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಕೋಚ್​ ನಿಂಗರಾಜ ಕೋಡಿಹಳ್ಳಿ..

ಈಗಾಗಲೇ ನಗರದ ಹಲವರು ಸಹಾಯ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣಕಾಸು ನೆರವು ಬೇಕಾಗಿದೆ, ದಯಮಾಡಿ ಸಾರ್ವಜನಿಕರು, ರಾಜಕಾರಣಿಗಳು ಸಹಾಯ ಮಾಡಬೇಕು ಎಂದು ಕೋಚ್ ‌ನಿಂಗರಾಜ ಕೋಡಿಹಳ್ಳಿ ಮನವಿ ಮಾಡಿದ್ದಾರೆ.

ABOUT THE AUTHOR

...view details