ಹಾವೇರಿ : ರಾಜ್ಯದಲ್ಲಿ ಜನತಾ ಕರ್ಫ್ಯೂ ವಿಧಿಸಿದ್ದರಿಂದಾಗಿ ರಸ್ತೆಬದಿ ಚಿಕ್ಕಚಿಕ್ಕ ಟಿಫಿನ್ ಸೆಂಟರ್ ಇಟ್ಟುಕೊಂಡಿದ್ದವರ ಬದುಕು ಬೀದಿಗೆ ಬಿದ್ದಿದೆ.
ರಸ್ತೆಬದಿ ಟಿಫಿನ್ ಸೆಂಟರ್ ಇಟ್ಟುಕೊಂಡಿದ್ದವರ ಬದುಕು ಅತಂತ್ರ.. ಕೊರೊನಾದಿಂದಾಗಿ ಟೀ ಸ್ಟಾಲ್, ಇಡ್ಲಿ-ವಡಾ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೊಡ್ಡ-ದೊಡ್ಡ ಹೋಟೆಲ್ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಲ್ಪಿಸಲಾಗಿದೆ.
ಆದರೆ, ರಸ್ತೆಬದಿ ಚಿಕ್ಕಚಿಕ್ಕ ಟಿಫಿನ್ ಸೆಂಟರ್ಗಳಲ್ಲಿ ಸರಿಯಾದ ಪಾರ್ಸೆಲ್ ಸೇವೆಯಿಲ್ಲ. ಹೀಗಾಗಿ, ಮುಂಜಾನೆ 6 ರಿಂದ 10 ಗಂಟೆವರೆಗೆ ರಸ್ತೆಬದಿ ಟೀ, ತಿಂಡಿ ಮಾರಾಟ ಮಾಡುತ್ತಿದ್ದವರು ಸಂಕಷ್ಟಕ್ಕೊಳಗಾಗಿದ್ದಾರೆ.
ಹೀಗಾಗಿ, 10 ಗಂಟೆಯವರೆಗೆ ಟಿಫಿನ್ ಸೆಂಟರ್ಗಳಲ್ಲಿ ಉಪಹಾರ ಸೇವನೆಗೆ ಅವಕಾಶ ನೀಡುವಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.
ಓದಿ:ಚಾಮರಾಜನಗರ ದುರಂತಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೇರ ಹೊಣೆ : ಡಿ ಕೆ ಸುರೇಶ್ ಆರೋಪ