ಹಾವೇರಿ: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನತಾ ಕರ್ಫ್ಯೂ ಏಳನೇ ದಿನಕ್ಕೆ ಕಾಲಿಟ್ಟಿದೆ. ಜನತಾ ಕರ್ಫ್ಯೂ ಜಾರಿಗೆ ತಂದಾಗಿನಿಂದ ಕುರಿ ಮತ್ತು ಕೋಳಿ ಮಾಂಸದಂಗಡಿಯ ವ್ಯಾಪಾರಿಗಳು ನಷ್ಟದಲ್ಲಿದ್ದಾರೆ.
ದಿನಕ್ಕೆ ಕ್ಟಿಂಟಾಲ್‌ಗಟ್ಟಲೆ ಕುರಿ ಮಾಂಸ ಮಾರುತ್ತಿದ್ದ ನಮಗೆ 250 ಗ್ರಾಂ ಮಾಂಸ ಮಾರಾಟ ಮಾಡುವುದು ಕಷ್ಟವಾಗಿದೆ. ನಮ್ಮ ಗ್ರಾಹಕರು ಬರುವುದೇ ಮಧ್ಯಾಹ್ನ 12 ಗಂಟೆಯ ನಂತರ. ಅಂತಹದರಲ್ಲಿ ಸರ್ಕಾರ 12 ಗಂಟೆಗೆ ಅಂಗಡಿ ಬಂದ್ ಮಾಡಲು ಆದೇಶಿಸಿದೆ. ಇನ್ನೇನು ವ್ಯಾಪಾರ ಆರಂಭವಾಯಿತು ಎನ್ನುವಷ್ಟರಲ್ಲಿಯೇ 12 ಗಂಟೆಯಾಗುತ್ತೆ. ಪೊಲೀಸರು ಬಂದು ಅಗಂಡಿ ಮುಚ್ಚಿಸುತ್ತಾರೆ ಎನ್ನುತ್ತಾರೆ ವರ್ತಕರು.