ಕರ್ನಾಟಕ

karnataka

ETV Bharat / state

ಬೆಲ್ಲ ತಯಾರಿಸುವ ಆಲೆಮನೆಗೆ ಬೇಕು ಸರ್ಕಾರದ ಸಹಾಯ: ಮಾಲೀಕರಿಗೆ ಕಾಡ್ತಿದೆ ಕಾರ್ಮಿಕರ ಕೊರತೆ - ಆಲೆಮನೆಗೆ ಕಾರ್ಮಿಕರ ಕೊರತೆ

ಸುಮಾರು ನೂರಕ್ಕೂ ಹೆಚ್ಚು ಇರುವ ಆಲೆಮನೆಗಳಲ್ಲಿ ಅಂದಾಜು ಮೂರು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಾರೆ. ವಿಶೇಷವಾಗಿ ಬೆಲ್ಲ ತಯಾರಿಸಲು ಉತ್ತರ ಪ್ರದೇಶದಿಂದ ಇಲ್ಲಿ ಕಾರ್ಮಿಕರು ಬರುತ್ತಾರೆ.

Jaggery
Jaggery

By

Published : Oct 13, 2020, 11:10 PM IST

ಹಾನಗಲ್(ಹಾವೇರಿ):ಬೆಲ್ಲ ತಯಾರಿಸುವ ಆಲೆಮನೆಗಳು ಜಿಲ್ಲೆಯಲ್ಲಿ ನೂರಾರಿವೆ. ಆದರೆ ಕಾರ್ಮಿಕರ ಕೊರತೆಯಿಂದಾಗಿ ಸದ್ಯ ಅವು ಮುಚ್ಚುವ ಹಂತಕ್ಕೆ ಬಂದು ತಲುಪಿವೆ. ಕಾರ್ಮಿಕರಿಲ್ಲದೆ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಬೆಲ್ಲ ತಯಾರಿಸುವ ಆಲೆಮನೆ

ಜಿಲ್ಲೆಯ ಹಾನಗಲ್ ತಾಲೂಕಿನ ಶಿಗೀಹಳ್ಳಿ, ಶಿಂಗಾಪೂ, ಆಡೂರ ಗ್ರಾಮಗಳಲ್ಲಿ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಆಲೆ ಮನೆಗಳನ್ನ ನಿರ್ಮಿಸಿಕೊಂಡು ತಮ್ಮ ಜಮೀನನಲ್ಲಿದ್ದ ಕಬ್ಬುಗಳನ್ನ ಅರಿಯುತ್ತಾರೆ. ಆಲೆ ಮನೆಗಳಲ್ಲಿ ತಯಾರಿಸಿದ ಬೆಲ್ಲವನ್ನ ಸ್ವತಃ ಮಾರ್ಕೆಟ್​ಗೆ ಕಳುಹಿಸುತ್ತಾರೆ. ಆದರೆ ಇದೀಗ ಕಾರ್ಮಿಕರ ಕೊರತೆಯಿಂದ ಅವರು ಸಂಕಷ್ಟ ಎದುರಿಸುತ್ತಿದ್ದಾರೆ.

ಸುಮಾರು ನೂರಕ್ಕೂ ಹೆಚ್ಚು ಇರುವ ಆಲೆಮನೆಗಳಲ್ಲಿ ಅಂದಾಜು ಮೂರು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಾರೆ. ವಿಶೇಷವಾಗಿ ಬೆಲ್ಲ ತಯಾರಿಸಲು ಉತ್ತರ ಪ್ರದೇಶದಿಂದ ಇಲ್ಲಿ ಕಾರ್ಮಿಕರು ಬರುತ್ತಾರೆ. ಇವರಿಗೆ ಸಂಬಳದ ಜೊತೆಗೆ ವಸತಿಯ ವ್ಯವಸ್ಥೆಯನ್ನ ಇಲ್ಲಿನ ಮಾಲೀಕರು ಏರ್ಪಾಡು ಮಾಡುತ್ತಾರೆ. ಆದ್ರೇ ಇದೀಗ ಆಲೆ ಮನೆಯ ಮಾಲಿಕರಿಗೆ ಕಾರ್ಮಿಕರನ್ನ ಕರೆತರುವುದು ಮತ್ತು ಅವರನ್ನ ವ್ಯವಸ್ಥಿತ ರೀತಿಯಲ್ಲಿ ನೋಡಿಕೊಳ್ಳುವುದೇ ಸಮಸ್ಯೆಯಾಗಿದೆ.

ತಯಾರು ಮಾಡಿದ ಬೆಲ್ಲಕ್ಕೆ ಸರಿಯಾದ ಬೆಲೆ ಸಿಗ್ತಾ ಇಲ್ಲ ಮತ್ತು ಮಾರ್ಕೆಟ್ ವ್ಯವಸ್ಥೆಯಿಲ್ಲದೆ ಕೈ ತುಂಬ ಲಾಭ ಸಿಗದಂತಾಗಿದೆ. ಆಲೆಮನೆಗೆ ಮಾಡಿದ ಖರ್ಚು ಕೈ ಸೇರುತಿಲ್ಲ ಸರಕಾರ ಆಲೆಮನೆಗೆ ವಿಷೇಶ ಅನುದಾನವನ್ನು ನೀಡಬೇಕು ಏನಾದರು ಸಹಾಯ ಮಾಡಬೇಕು ಎಂಬುದೆ ಇಲ್ಲಿನ‌ ಮಾಲೀಕರ ಅಭಿಪ್ರಾಯವಾಗಿದೆ.

ABOUT THE AUTHOR

...view details