ಕರ್ನಾಟಕ

karnataka

ETV Bharat / state

ಟಿಪ್ಪು ಒಬ್ಬ ದೇಶ ಭಕ್ತ, ಅವರ ಹೆಸರನ್ನು ರಾಜಕೀಯಕ್ಕೆ ಬಳಸುವುದು ಸರಿಯಲ್ಲ: ಸಲೀಂ ಅಹ್ಮದ್ - ಗೋವಿಂದ ಕಾರಜೋಳ

ಟಿಪ್ಪು ಸುಲ್ತಾನ್​ ಕುರಿತ ವಿವಾದದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರತಿಕ್ರಿಯಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

By ETV Bharat Karnataka Team

Published : Dec 25, 2023, 7:54 PM IST

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

ಹಾವೇರಿ:ಟಿಪ್ಪು ಹೆಸರನ್ನು ಕೇವಲ ರಾಜಕೀಯ ವಿಷಯಕ್ಕಾಗಿ ಪ್ರಸ್ತಾಪ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. ಹಾವೇರಿಯಲ್ಲಿಂದು ಮಾತನಾಡಿದ ಅವರು, ಟಿಪ್ಪು ಸುಲ್ತಾನ್​ ಒಬ್ಬ ದೇಶ ಭಕ್ತ. ಅವರ ಬಗ್ಗೆ ಈ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಮಾಡಿದ್ದರು. ರಾಷ್ಟ್ರಪತಿಯವರೇ ತಮ್ಮ ಭಾಷಣದಲ್ಲಿ ಟಿಪ್ಪು ಹೆಸರು ಪ್ರಸ್ತಾಪಿಸಿದ್ದಾರೆ. ಟಿಪ್ಪು ಬಗ್ಗೆ ಇತಿಹಾಸವಿದೆ. ಇದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಟಿಪ್ಪು ಬಗ್ಗೆ ಮೊದಲು ಯಡಿಯೂರಪ್ಪರ ಮುಂದೆ ಹೇಳಲಿ ಎಂದರು.

ಈಶ್ವರಪ್ಪನವರು ಸಮಾಜ ಒಡೆಯುವ ಹಿನ್ನೆಲೆಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಇದು ಒಳ್ಳೆಯದಲ್ಲ. ರಾಜ್ಯದಲ್ಲಿ ಶಾಂತಿ, ನೆಮ್ಮದಿ, ಸಹಬಾಳ್ವೆ ಇದೆ. ಇದಕ್ಕೆ ಅವರ ಸಹಕಾರವೂ ಬೇಕು. ನಾವು ಸಮಾಜ ಒಡೆಯುವಂತಹ ಕೆಲಸ ಮಾಡದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಎಲ್ಲರಿಗೂ ಸಮಪಾಲು ಸಮಬಾಳು ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.

ಜನ ನಮಗೆ ಆಶೀರ್ವಾದ ಮಾಡಿ ಸರ್ಕಾರ ರಚಿಸಲು ಅಧಿಕಾರ ನೀಡಿದ್ದಾರೆ. ಭ್ರಷ್ಟಾಚಾರಮುಕ್ತ ಸಂಕಲ್ಪದೊಂದಿಗೆ ಮುಂದಿನ 5 ವರ್ಷ ಸರ್ಕಾರ ಅಧಿಕಾರ ನಡೆಸಲಿದೆ. ನಮಗೆ ಆಪರೇಶನ್ ಹಸ್ತ ಮಾಡುವ ಅನಿವಾರ್ಯತೆ ಇಲ್ಲ. ಜನ 136 ಸ್ಥಾನಗಳಲ್ಲಿ ನಮ್ಮನ್ನು ಗೆಲ್ಲಿಸಿದ್ದಾರೆ. 2024ರ ಜನವರಿ ತಿಂಗಳಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಸಮಾವೇಶ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಬಿಜೆಪಿಯವರು ಅತ್ತು, ಕರೆದು ಕೊನೆಗೆ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿದರು. ಅವರು ಮೊದಲು ತಮ್ಮ ಪಕ್ಷದ ಆಂತರಿಕ ವಿಚಾರಗಳನ್ನು ಸರಿ ಮಾಡಿಕೊಳ್ಳಲಿ. ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬರುವ ನಾಯಕರನ್ನು ಸೇರಿಸಿಕೊಳ್ಳುತ್ತೇವೆ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಈ ಕುರಿತಂತೆ ಜನವರಿ ಅಂತ್ಯದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.

ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ವಿವಾದಿತ ಹೇಳಿಕೆಗೆ, ಅವರು ಆ ರೀತಿ ಹೇಳಿಕೆ ನೀಡುವ ನೀಡುವ ಸಾಧ್ಯತೆ ಇಲ್ಲ. ವರದಿಗಾರಿಕೆಯಲ್ಲಿ ತಪ್ಪಾಗಿರಬಹುದು ಎಂದರು. ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗಿ ಭೇಟಿ ಕೊಟ್ಟು ಬರ ಸಮಸ್ಯೆ ತಿಳಿಸಿದ್ದಾರೆ. ಕೇಂದ್ರದಲ್ಲಿ ಐದು ಸಚಿವರು ರಾಜ್ಯದವರಿದ್ದಾರೆ. 25 ಜನ ಸಂಸದರಿದ್ದಾರೆ. ರಾಜ್ಯಕ್ಕೆ ಬೇಕಾಗುವ ಅನುದಾನ ನೀಡಲಿ. ಅಕ್ಕಿಯಲ್ಲಿ ರಾಜಕಾರಣ ಮಾಡಿದಂತೆ ಬರದಲ್ಲೂ ರಾಜಕಾರಣ ಮಾಡಬೇಡಿ. ಮಾನ, ಮರ್ಯಾದೆ ಇದ್ದರೆ ಕೇಂದ್ರದಿಂದ ಹಣ ಬಿಡುಗಡೆ ಮಾಡಬೇಕು. ಚುನಾವಣೆ ಇಟ್ಟುಕೊಂಡು ಇದರಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ:ಬಿ.ಕೆ. ಹರಿಪ್ರಸಾದ್ ಮಾನಸಿಕ ಸ್ಥಿತಿ ಸರಿಯಿಲ್ಲ, ಕಾಂಗ್ರೆಸ್​​ನಲ್ಲಿ ಲೆಕ್ಕಕ್ಕಿಲ್ಲದ ನಾಯಕ: ಗೋವಿಂದ ಕಾರಜೋಳ

ABOUT THE AUTHOR

...view details