ಹಾವೇರಿ :ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ವಿರುದ್ಧ ನಾನು ಈ ಹಿಂದೆ ಮಾತನಾಡಿದ್ದು ನಿಜ. ಪಕ್ಷ ಅಂದಮೇಲೆ ಭಿನ್ನಾಭಿಪ್ರಾಯಗಳು ಇರುವುದು ಸಹಜವೆಂದು ಮಾಜಿ ಸಚಿವ ಕೆ.ಬಿ ಕೋಳಿವಾಡ್ ತಿಳಿಸಿದ್ದಾರೆ.
ಪ್ರತಿಪಕ್ಷ ನಾಯಕರೊಂದಿಗೆ ಭಿನ್ನಾಭಿಪ್ರಾಯಗಳಿರುವುದು ಸಹಜ... ಮಾಜಿ ಸಚಿವ ಕೆ.ಬಿ.ಕೋಳಿವಾಡ್ - ಕೆ.ಬಿ. ಕೋಳಿವಾಡ ಸ್ಪಷ್ಟನೆ
ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ವಿರುದ್ಧ ನಾನು ಈ ಹಿಂದೆ ಮಾತನಾಡಿದ್ದು ನಿಜ. ಪಕ್ಷ ಅಂದ ಮೇಲೆ ಭಿನ್ನಾಭಿಪ್ರಾಯಗಳು ಇರುವುದು ಸಹಜವೆಂದು ಮಾಜಿ ಸಚಿವ ಕೆ.ಬಿ. ಕೋಳಿವಾಡ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಬಿ ಕೋಳಿವಾಡ್, ಈಗ ಸ್ವತಃ ಸಿದ್ದರಾಮಯ್ಯನವರೇ ನನಗೆ ಉಪಚುನಾವಣೆಯಲ್ಲಿ ಸ್ಪರ್ಧಿಸು, ಗೆಲ್ಲಿಸುವ ಜವಬ್ದಾರಿ ನನ್ನದು ಎಂದಿದ್ದಾರೆ ಎಂದು ತಿಳಿಸಿದರು. ಈ ಬಾರಿ ನನ್ನ ಮಗ ಪ್ರಕಾಶನನ್ನ ಉಪಚುನಾವಣೆಯ ಕಣಕ್ಕೆ ಇಳಿಸಬೇಕೆಂದು ನಿರ್ಧಾರ ಮಾಡಿದ್ದೆ. ಆದರೆ ಸ್ವತಃ ಸಿದ್ದರಾಮಯ್ಯನವರೇ ನೀವೆ ನಿಲ್ಲಬೇಕು ಎಂದಿದ್ದಾರೆ ಅದರಂತೆ ತಾನು ಉಪಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.
ಇದೇ ವೇಳೆ ಸಿ.ಎಂ.ಯಡಿಯೂರಪ್ಪ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಬಿಎಸ್ವೈ, ಪಕ್ಷದ ವರಿಷ್ಠರಿಗೆ ಒಲ್ಲದ ಕೂಸಾಗಿದ್ದಾರೆ ಎಂದು ಆರೋಪಿಸಿದರು. ಯಡಿಯೂರಪ್ಪ ಸರ್ಕಾರಕ್ಕೆ ಅವರ ಶಾಸಕರೇ ಸರಿಯಾಗಿ ಬೆಂಬಲ ನೀಡುತ್ತಿಲ್ಲ. ಪ್ರಸ್ತುತ ಪರಿಸ್ಥಿತಿ ನೋಡಿದರೆ ಯಡಿಯೂರಪ್ಪ ಸರ್ಕಾರ ಪೂರ್ಣಾವಧಿಯಾಗುತ್ತೋ ಇಲ್ಲವೋ ಎನ್ನುವುದೇ ಅನುಮಾನ. ಇನ್ನ ಅನರ್ಹ ಶಾಸಕರು ಮತ್ತು ಬಿಜೆಪಿ ಶಾಸಕರ ನಡುವೆ ಸರಿಯಾದ ಹೊಂದಾಣಿಕೆ ಇಲ್ಲ ಎಂದು ಕೋಳಿವಾಡ ಆರೋಪಿಸಿದರು. ಉಪಚುನಾವಣೆಯಲ್ಲಿ ಬಿಜೆಪಿಗೆ ಎಂಟಕ್ಕಿತ್ತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಅನರ್ಹ ಶಾಸಕರ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ಇನ್ನೂ ಎರಡ್ಮೂರು ದಿನಗಳಲ್ಲಿ ಬರುವ ಸಾಧ್ಯತೆ ಇದೆ ಎಂದು ಕೋಳಿವಾಡ್ ಅಭಿಪ್ರಾಯಪಟ್ಟರು.