ಹಾವೇರಿ: ಜಿಲ್ಲಾದ್ಯಂತ ಗುರುವಾರ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.
ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಮಿಕ ದಿನಾಚರಣೆ - ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ
ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಆಚರಣೆ ಮಾಡಲಾಯಿತು.
![ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಮಿಕ ದಿನಾಚರಣೆ international workers Day while maintaining social distance](https://etvbharatimages.akamaized.net/etvbharat/prod-images/768-512-7021184-299-7021184-1588350889696.jpg)
ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಮಿಕ ದಿನಾಚರಣೆ
ಕೊರೊನಾ ಸೋಂಕಿನಿಂದಾಗಿ ಸಂಘಟಿತ, ಅಸಂಘಟಿತ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ಸರಳವಾಗಿ ಕಾರ್ಮಿಕ ದಿನಾಚರಣೆ ನಡೆಯಿತು. ನಗರದ ಹೆಸ್ಕಾಂ ಸಭಾಭವನದ ಬಳಿ ಇರುವ ಕಾರ್ಮಿಕ ಸ್ಮಾರಕಕ್ಕೆ ಕಾರ್ಮಿಕ ದಿನದ ನಿಮಿತ್ತ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.
ಸಾಮಾಜಿಕ ಅಂತರ ಇರುವುದರಿಂದ ಹೆಸ್ಕಾಂ ನೌಕರರು ಅಂತರ ಕಾಯ್ದುಕೊಂಡು ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. ಕರ್ತವ್ಯದಲ್ಲಿ ಈ ಹಿಂದೆ ಸಾವನ್ನಪ್ಪಿದ ನೌಕರರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.