ಹಾವೇರಿ: ಲಾಕ್ ಡೌನ್ ಅವಧಿಯಲ್ಲಿ ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ಆಹಾರ ವಿತರಣೆಗೆ ಪೌರಾಡಳಿತ ಇಲಾಖೆ ಆದೇಶ ನೀಡಿದೆ. ಆದರೆ, ಹಾವೇರಿಯಲ್ಲಿ ಕ್ಯಾಂಟೀನ್ ಬಂದ್ ಆಗಿದೆ.
ನಗರದ ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚಿ ದಿನಗಳೇ ಕಳೆದಿವೆ. ದಿನನಿತ್ಯ ಇಲ್ಲಿಗೆ ಹಲವಾರು ಜನ ಬಂದು ಬಾಗಿಲು ಹಾಕಿದ್ದನ್ನು ನೋಡಿ ವಾಪಸ್ ಹೋಗುತ್ತಿದ್ದಾರೆ. ಸರ್ಕಾರವೇನೋ ಉಚಿತ ಆಹಾರ ವಿತರಣೆ ಅಂತ ಘೋಷಣೆ ಮಾಡಿ ಬಿಟ್ಟಿದೆ. ಆದರೆ, ನಗರದಲ್ಲಿ ಕ್ಯಾಂಟೀನ್ಗಳು ಬಂದ್ ಆಗಿರುವುದರಿಂದ ಉಚಿತ ಬಿಡಿ, ದುಡ್ಡು ಕೊಟ್ಟರೂ ಆಹಾರ ಸಿಗುತ್ತಿಲ್ಲ. ಇದರಿಂದ ಜನ ಸಮಸ್ಯೆ ಎದುರಿಸುವಂತಾಗಿದೆ.