ಹಾವೇರಿ: ಜಿಲ್ಲೆಯ ವರದಾ ಮತ್ತು ಧರ್ಮಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಹೊಸರಿತ್ತಿ ತಾಲೂಕಿನ ರಾಘವೇಂದ್ರ ಮಠಕ್ಕೆ ನೀರು ನುಗ್ಗಿದೆ.
ಹೆಚ್ಚಿದ ವರದಾ, ಧರ್ಮಾ ನದಿ ನೀರಿನ ಪ್ರಮಾಣ: ರಾಘವೇಂದ್ರ ಮಠ ಜಲಾವೃತ - ಧರ್ಮಾ ನದಿ
ಹಾವೇರಿ ಜಿಲ್ಲೆಯ ವರದಾ ಮತ್ತು ಧರ್ಮಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಹೊಸರಿತ್ತಿ ತಾಲೂಕಿನ ರಾಘವೇಂದ್ರ ಮಠಕ್ಕೆ ನೀರು ನುಗ್ಗಿದ್ದು, ಮತ್ತೊಂದೆಡೆ ಧರ್ಮಾ ನದಿ ನೀರು ಜಿಲ್ಲೆಯ ಹಾನಗಲ್ ತಾಲೂಕಿನ ಅಲ್ಲಾಪುರ ಗ್ರಾಮಕ್ಕೆ ನುಗ್ಗಿದೆ. ಅಲ್ಲಾಪುರ ಗ್ರಾಮದಲ್ಲಿನ ಕೆಲವು ಮನೆಗಳು ಜಲಾವೃತಗೊಂಡಿವೆ.
ರಾಘವೇಂದ್ರ ಮಠ ಜಲಾವೃತ
ರಾಘವೇಂದ್ರ ಮಠದ ಆವರಣದ ತುಂಬ ನೀರು ತುಂಬಿಕೊಂಡಿದೆ. ಮತ್ತೊಂದೆಡೆ ಧರ್ಮಾ ನದಿ ನೀರು ಜಿಲ್ಲೆಯ ಹಾನಗಲ್ ತಾಲೂಕಿನ ಅಲ್ಲಾಪುರ ಗ್ರಾಮಕ್ಕೆ ನುಗ್ಗಿದೆ. ಅಲ್ಲಾಪುರ ಗ್ರಾಮದಲ್ಲಿನ ಕೆಲವು ಮನೆಗಳು ಜಲಾವೃತಗೊಂಡಿದ್ದು, ದರ್ಗಾ ಸಹ ನೀರಿನಿಂದ ಮುಳುಗಿದೆ.
ಇನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಲೀಲಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನದಿ ನೀರಿನಿಂದ ತೊಂದರೆಗೊಳಗಾದ ಜನರಿಗೆ ತಕ್ಷಣ ಪರಿಹಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.