ಕರ್ನಾಟಕ

karnataka

ETV Bharat / state

ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಸಂಪರ್ಕ ಮತ್ತು ಮಾಹಿತಿ ನೂತನ ಕೇಂದ್ರ ಉದ್ಘಾಟನೆ - MP Shivakumar udasi

ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಸಂಪರ್ಕ ಮತ್ತು ಮಾಹಿತಿ ನೂತನ ಕೇಂದ್ರವನ್ನು ಹಾವೇರಿ ಸಂಸದ ಶಿವಕುಮಾರ್ ಉದಾಸಿ ಉದ್ಘಾಟಿಸಿದರು.

Inauguration of the new Center for Communication and Information in Have
ಸಂಪರ್ಕ ಮತ್ತು ಮಾಹಿತಿ ನೂತನ ಕೇಂದ್ರ ಉದ್ಘಾಟನೆ

By

Published : Feb 15, 2020, 6:25 PM IST

ಹಾವೇರಿ:ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಸಂಪರ್ಕ ಮತ್ತು ಮಾಹಿತಿ ನೂತನ ಕೇಂದ್ರವನ್ನು ಹಾವೇರಿ ಸಂಸದ ಶಿವಕುಮಾರ್ ಉದಾಸಿ ಉದ್ಘಾಟಿಸಿದರು.

ನಗರದ ಡಾ.ಜೆ.ವಿ.ಪಂಡಿತ ಆಸ್ಪತ್ರೆಯಲ್ಲಿ ಸಂಪರ್ಕ ಕೇಂದ್ರ ಉದ್ಘಾಟನೆಯಾಗಿದ್ದು, ಇದರ ಸದುಪಯೋಗಕ್ಕೆ ಮುಂದಾಗುವಂತೆ ಶಿವಕುಮಾರ್ ಉದಾಸಿ ಮನವಿ ಮಾಡಿದರು.

ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ (ಕೆಎಲ್ಇ) ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಜಿಲ್ಲೆಯಲ್ಲಿ ಸಂಪರ್ಕ ಮತ್ತು ಮಾಹಿತಿ ಕೇಂದ್ರ ಇರಲಿಲ್ಲ. ತಡವಾಗಿಯಾದರೂ ಈಗ ಕೇಂದ್ರ ಆರಂಭವಾಗಿದೆ ಎಂದರು.

ಸಂಪರ್ಕ ಮತ್ತು ಮಾಹಿತಿ ನೂತನ ಕೇಂದ್ರ ಉದ್ಘಾಟನೆ

ರೋಗಿಗಳ ಸಂಪರ್ಕ ಕೇಂದ್ರಕ್ಕೆ ಬಂದರೆ ಅವಶ್ಯವಿದ್ದರೆ ಸಂಪರ್ಕ ಕೇಂದ್ರದಲ್ಲಿಯೇ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. ಇಲ್ಲದಿದ್ದರೇ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಕಳುಹಿಸಿಕೊಡುತ್ತಾರೆ. ಅಲ್ಲಿ ಸಂಪೂರ್ಣವಾಗಿ ಉಚಿತವಾದ ಚಿಕಿತ್ಸೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಕೆಎಲ್ಇ ಸಂಸ್ಥೆಯ ಆಸ್ಪತ್ರೆ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದರು.

ABOUT THE AUTHOR

...view details