ಹಾವೇರಿ: ಮಳೆಗಾಲ ಆರಂಭವಾದರೆ ಮರಳು ಸಿಗುವುದು ಕಷ್ಟ ಎಂಬುದನ್ನ ಅರಿತ ಅಕ್ರಮ ಮರಳು ದಂಧೆಕೋರರು ಈಗಾಗಲೇ ಜಿಲ್ಲೆಯಲ್ಲಿ ಹರಿಯುವ ನಾಲ್ಕು ನದಿಗಳ ಒಡಲನ್ನು ದೋಚುತ್ತಿದ್ದಾರೆ.
ಅಕ್ರಮ ಮರಳುಗಾರಿಗೆ: ತುಂಗಭದ್ರೆಯ ಒಡಲು ದೋಚುತ್ತಿರುವ ದಂಧೆಕೋರರು
ಹಾವೇರಿ ಜಿಲ್ಲೆಯಲ್ಲಿ ಅಕ್ರಮವಾಗಿ ಸಿಕ್ಕ ಸಿಕ್ಕ ಕಡೆ ನದಿಯ ಒಡಲನ್ನ ಅವೈಜ್ಞಾನಿಕವಾಗಿ ಬಗೆಯುತ್ತಿದ್ದು, ಪರಿಣಾಮ ನದಿಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳಾಗಿವೆ. ಇವು ಅಮಾಯಕರ ಸಾವಿನಕೂಪಗಳಾಗಿಯೂ ಕೂಡ ಪರಿಣಮಿಸುತ್ತಿವೆ. ಗುಂಡಿಗಳಂತೆ ಕಾಣುವ ನದಿಯಲ್ಲಿ ನೀರು ಕುಡಿಯಲು ಹೋದ ಅಮಾಯಕರು ಅಕ್ರಮ ಮರಳುಕೋರರು ತಗೆದ ಗುಂಡಿಗಳಿಗೆ ಆಹುತಿಯಾಗುತ್ತಿದ್ದಾರೆ.
ಹೌದು, ಜಿಲ್ಲೆಯಲ್ಲಿ ಅಕ್ರಮವಾಗಿ ಸಿಕ್ಕ ಸಿಕ್ಕ ಕಡೆ ನದಿಯ ಒಡಲನ್ನ ಅವೈಜ್ಞಾನಿಕವಾಗಿ ಬಗೆಯುತ್ತಿದ್ದಾರೆ. ಪರಿಣಾಮ ನದಿಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳಾಗಿದ್ದು ಇವು ಅಮಾಯಕರ ಸಾವಿನಕೂಪಗಳಾಗಿ ಪರಿಣಮಿಸುತ್ತಿವೆ. ಗುಂಡಿಗಳಂತೆ ಕಾಣುವ ನದಿಯಲ್ಲಿ ನೀರು ಕುಡಿಯಲು ಹೋದ ಅಮಾಯಕರು ಅಕ್ರಮ ಮರಳುಕೋರರು ತಗೆದ ಗುಂಡಿಗಳಿಗೆ ಆಹುತಿಯಾಗುತ್ತಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯ ವಿವಿಧ ನದಿ ತೀರದಲ್ಲಿ ಐದಕ್ಕೂ ಅಧಿಕ ಜನ ನೀರುಪಾಲಾಗಿದ್ದಾರೆ. ತುಂಗಭದ್ರಾ ನದಿ ಮರಳಂತು ಬೇರೆ ರಾಜ್ಯಗಳಲ್ಲಿ ಸಹ ಪ್ರಸಿದ್ಧಿ ಪಡೆದಿದ್ದು, ತುಂಗಭದ್ರೆಯ ಮರಳಿಗೆ ಬಾರಿ ಬೇಡಿಕೆ ಇದೆ. ಕಳೆದ ತಿಂಗಳಲ್ಲಿ ನಾಲ್ಕು ಜನ ತುಂಗಭದ್ರೆಯಲ್ಲಿನ ಅಕ್ರಮ ಗುಂಡಿಗಳಿಗೆ ಬಲಿಯಾಗಿದ್ದಾರೆ. ಆದರೂ ಸಹ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಈ ಕುರಿತಂತೆ ಜಿಲ್ಲಾಧಿಕಾರಿಯನ್ನ ಕೇಳಿದರೆ ಸರಿಯಾಗಿ ಉತ್ತರಿಸುತ್ತಿಲ್ಲ. ಆದಷ್ಟು ಬೇಗ ಅಧಿಕಾರಿಗಳು ಈ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕಿದೆ. ಇಲ್ಲದಿದ್ದರೇ ಇನ್ನಷ್ಟು ಅಮಾಯಕರು ಅಕ್ರಮ ಮರಳುಗಾರಿಕೆಗೆ ಬಲಿಯಾಗುವುದರಲ್ಲಿ ಎರಡು ಮಾತಿಲ್ಲ.