ಕರ್ನಾಟಕ

karnataka

ETV Bharat / state

ರಾಣೇಬೆನ್ನೂರು ನಗರದಲ್ಲಿ ಎಗ್ಗಿಲ್ಲದೆ ಸಾಗಿದೆ ಮಟ್ಕಾ ದಂಧೆ.. ಕಣ್ಮುಚ್ಚಿ ಕುಳಿತ ಪೊಲೀಸ್​ ಇಲಾಖೆ - ರಾಣೆಬೆನ್ನೂರು ನಗರ ಮಟ್ಕಾ ದಂಧೆ

ರಾಣೇಬೆನ್ನೂರು ನಗರದ ಕೋರ್ಟ್ ಹಿಂಭಾಗವಿರುವ ಬೀಡಿ ಸ್ಟಾಲ್‌ನೊಳಗಡೆ ಕಳೆದ ಎರಡು ತಿಂಗಳಿನಿಂದ ರಾಜಾರೋಷವಾಗಿ‌ ಮಟ್ಕಾ ಮಾರಾಟ ನಡೆಯುತ್ತಿದೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ತಾವೇ ಗುಪ್ತವಾಗಿ ಮಟ್ಕಾ ಬರೆಯುತ್ತಿರುವುದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ರಾಣೆಬೆನ್ನೂರು ನಗರದಲ್ಲಿ ಎಗ್ಗಿಲ್ಲದೆ ಸಾಗಿದೆ ಮಟ್ಕಾ ದಂಧೆ: ಕಣ್ಮುಚ್ಚಿ ಕುಳಿತ ಪೊಲೀಸ್​ ಇಲಾಖೆ

By

Published : Oct 7, 2019, 6:19 PM IST

ರಾಣೆಬೆನ್ನೂರು:ವಾಣಿಜ್ಯನಗರಿಯಲ್ಲಿ ಅನೈತಿಕ, ಅಕ್ರಮ ಚಟುವಟಿಕೆಗಳು ಕಣ್ಮುಂದೆ ನಡೆದರೂ ಕೂಡ ಪೊಲೀಸ್​ ಇಲಾಖೆ ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.

ರಾಣೇಬೆನ್ನೂರು ನಗರದಲ್ಲಿ ಎಗ್ಗಿಲ್ಲದೆ ಸಾಗಿದೆ ಮಟ್ಕಾ ದಂಧೆ.. ಕಣ್ಮುಚ್ಚಿ ಕುಳಿತ ಪೊಲೀಸ್​ ಇಲಾಖೆ

ರಾಣೇಬೆನ್ನೂರು ನಗರದಲ್ಲಿ ದಿನ ನಿತ್ಯ ಹಲವಾರು ಅಕ್ರಮ ಚಟುವಟಿಕೆಗಳು ಬೆಳಕಿಗೆ ಬರುತ್ತಿವೆ. ಪ್ರತಿದಿನ ನೂರು, ಇನ್ನೂರು ದುಡಿಯುವ ಬಡ ಕಾರ್ಮಿಕರು ಮಟ್ಕಾ ಆಟದಲ್ಲಿ ಹಣ ಕಳೆದುಕೊಳ್ಳುತ್ತಿದ್ದು, ಅದೆಷ್ಟೋ ಕುಟುಂಬಗಳು ಬೀದಿಗೆ ಬೀಳುತ್ತಿವೆ.

ರಾಣೇಬೆನ್ನೂರು ನಗರದ ಕೋರ್ಟ್ ಹಿಂಭಾಗವಿರುವ ಬೀಡಿ ಸ್ಟಾಲ್‌ನೊಳಗಡೆ ಕಳೆದ ಎರಡು ತಿಂಗಳಿನಿಂದ ರಾಜಾರೋಷವಾಗಿ‌ ಮಟ್ಕಾ ಮಾರಾಟ ನಡೆಯುತ್ತಿದೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಪೊಲೀಸರಿಗೆ ಮಾಹಿತಿ ನೀಡಿದ್ರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ತಾವೇ ಗುಪ್ತವಾಗಿ ಮಟ್ಕಾ ಬರೆಯುತ್ತಿರುವುದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಇದೊಂದೇ ಅಲ್ಲ, ನಗರದ ಸಿದ್ದೇಶ್ವರನಗರ, ಮಾರುತಿನಗರ, ದೊಡ್ಡಪೇಟೆ, ಇಸ್ಲಾಂಪುರ ಓಣಿ ಸೇರಿ ನಗರದ ವಿವಿಧ ಕಡೆ ಮಟ್ಕಾ ಹಾವಳಿ ಜಾಸ್ತಿಯಾಗಿದೆ. ಆದರೆ, ಈ ಬಗ್ಗೆ ಪೊಲೀಸ್​ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಳ್ಳದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ABOUT THE AUTHOR

...view details