ಕರ್ನಾಟಕ

karnataka

ETV Bharat / state

ರಾಣೆಬೆನ್ನೂರು ಕ್ಷೇತ್ರಕ್ಕೆ ಉಪ ಚುನಾವಣೆ ನಡೆದ್ರೆ ನಾನೂ ಬಿಜೆಪಿ ಟಿಕೆಟ್​​​ ಆಕಾಂಕ್ಷಿ: ಬಸವರಾಜ್​​ ಕೇಲಗಾರ್​​ - ಬಸವರಾಜ್ ಕೇಲಗಾರ್

ರಾಣೆಬೆನ್ನೂರು ಕ್ಷೇತ್ರಕ್ಕೆ ಉಪ ಚುನಾವಣೆ ನಡೆದರೆ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ. ಆದರೆ ಈಗ ಅನರ್ಹರಾಗಿರುವ ಆರ್.ಶಂಕರ್‌ಗೆ ಬಿಜೆಪಿ ಟಿಕೆಟ್ ನೀಡಿದರೆ ಅದಕ್ಕೆ ತಾನು ಬದ್ಧನಾಗಿರುತ್ತೇನೆ ಎಂದು ಬಸವರಾಜ್ ಕೇಲಗಾರ್ ಹೇಳಿದರು.

ಬಸವರಾಜ್ ಕೇಲಗಾರ್

By

Published : Jul 27, 2019, 11:36 PM IST

ಹಾವೇರಿ:ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣೆ ನಡೆದರೆ ನಾನೂ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಬಸವರಾಜ್ ಕೇಲಗಾರ್ ಹೇಳಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು ರಾಣೆಬೆನ್ನೂರು ಉಪ ಚುನಾವಣೆ ನಡೆದರೆ ನಾನು ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿ. ಆದರೆ ಈಗ ಅನರ್ಹರಾಗಿರುವ ಆರ್.ಶಂಕರ್‌ಗೆ ಬಿಜೆಪಿ ಟಿಕೆಟ್ ನೀಡಿದರೆ, ಅದಕ್ಕೆ ತಾನು ಬದ್ಧನಾಗಿರುತ್ತೇನೆ. ಬಿಜೆಪಿ ಹೈಕಮಾಂಡ್​ ತೆಗೆದುಕೊಳ್ಳುವ ತೀರ್ಮಾಕ್ಕೆ ತಾನು ಬದ್ಧ ಎಂದು ಹೇಳಿದರು.

ರಾಣೆಬೆನ್ನೂರು ಉಪ ಚುನಾವಣೆ ಬಿಜೆಪಿ ಟಿಕೆಟ್​ ಆಕಾಂಕ್ಷಿ ಎಂದ ಬಸವರಾಜ್ ಕೇಲಗಾರ್

2018ರ ವಿಧಾನಸಭಾ ಚುನಾವಣೆಯಲ್ಲಿ 50 ಸಾವಿರ ಮತಗಳನ್ನು ತೆಗೆದುಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ನನಗೆ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ ಎಂದರು.

ABOUT THE AUTHOR

...view details