ಹಾವೇರಿ: ಹುಕ್ಕೇರಿ ಮಠ ಶ್ರೀಗಳ ಆಶೀರ್ವಾದಿಂದ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೂ ಸಚಿವ ಸ್ಥಾನ ಸಿಗಬಹುದು ಎಂಬ ವಿಶ್ವಾಸವನ್ನ ಹಾವೇರಿ ಶಾಸಕ ನೆಹರು ಓಲೇಕಾರ್ ವ್ಯಕ್ತಪಡಿಸಿದ್ದಾರೆ.
ಹೌದೌದು ನಾನೂ ಸಚಿವನಾಗಬೇಕೆಂಬುದು ಮನದಲ್ಲಿದೆ.. ಹೀಗೆ ಟವಲ್ ಹಾಕಿದ ಶಾಸಕ ಯಾರು ಗೊತ್ತಾ? - Hukkeri mutt shree blessings
ಹುಕ್ಕೇರಿ ಮಠದ ಶ್ರೀಗಳ ಆಶೀರ್ವಾದಿಂದ ಸಚಿವ ಸಂಪುಟ ವಿಸ್ತರಣೆಯಲ್ಲಿ ನಮಗೂ ಸಚಿವ ಸ್ಥಾನ ಸಿಗಬಹುದು ಎಂಬ ವಿಶ್ವಾಸವಿದೆ ಅಂತಾ ಹಾವೇರಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.
![ಹೌದೌದು ನಾನೂ ಸಚಿವನಾಗಬೇಕೆಂಬುದು ಮನದಲ್ಲಿದೆ.. ಹೀಗೆ ಟವಲ್ ಹಾಕಿದ ಶಾಸಕ ಯಾರು ಗೊತ್ತಾ? Olekar statement on minister position](https://etvbharatimages.akamaized.net/etvbharat/prod-images/768-512-5585221-thumbnail-3x2-hvr.jpg)
ಹೌದೌದು ನಾನೂ ಸಚಿವನಾಗಬೇಕೆಂಬುದು ಮನದಲ್ಲಿದೆ.. ಟವೆಲ್ ಹಾಕಿದ ಶಾಸಕ ಓಲೇಕಾರ್
ಹೌದೌದು ನಾನೂ ಸಚಿವನಾಗಬೇಕೆಂಬುದು ಮನದಲ್ಲಿದೆ.. ಟವೆಲ್ ಹಾಕಿದ ಶಾಸಕ ಓಲೇಕಾರ್
ಹಾವೇರಿ ಜಾನುವಾರು ಮಾರುಕಟ್ಟೆಯಲ್ಲಿ ಜಾನುವಾರು ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಸಚಿವ ಸ್ಥಾನ ಕುರಿತಂತೆ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದೆ. ಸಚಿವನಾಗಬಹುದು ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಇದೇ ವೇಳೆ, ರಾಜ್ಯಕ್ಕೆ ಅನುದಾನ ನೀಡುವ ಕುರಿತಂತೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಏನೂ ಹೇಳದಿರುವ ಕುರಿತು ಮಾತನಾಡಿದ ಶಾಸಕ ಓಲೇಕಾರ್, ಮೋದಿ ತಾವು ಬಂದಿರುವ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ. ರಾಜ್ಯಕ್ಕೆ ಪರಿಹಾರ ನೀಡುವ ಕುರಿತಂತೆ ಮೋದಿ ಮಾತನಾಡಲಿದ್ದಾರೆ ಮತ್ತು ರಾಜ್ಯಕ್ಕೆ ಸೂಕ್ತ ಅನುದಾನ ನೀಡಲಿದ್ದಾರೆ ಎಂದು ನೆಹರು ಓಲೇಕಾರ್ ಭರವಸೆ ನೀಡಿದರು.