ಹಾವೇರಿ:ತಮ್ಮ ಗುರುಗಳು ಮತ್ತು ಜನಪ್ರತಿನಿಧಿಗಳ ಸಲಹೆ ಮೇರೆಗೆ ನಾಮಪತ್ರ ವಾಪಸ್ ಪಡೆದಿರುವುದಾಗಿ ಕಬ್ಬಿಣಕಂತಿ ಮಠದ ಶಿವಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ನಾಮಪತ್ರ ವಾಪಸ್ ಪಡೆದಿದ್ದಕ್ಕೆ ಕಾರಣ ಬಿಚ್ಚಿಟ್ರು ಶಿವಲಿಂಗ ಸ್ವಾಮೀಜಿ
ಗುರುಗಳು ಮತ್ತು ಜನಪ್ರತಿನಿಧಿಗಳ ಸಲಹೆ ಮೇರೆಗೆ ನಾಮಪತ್ರ ವಾಪಸ್ ಪಡೆದಿದ್ದಾಗಿ ಹಿರೇಕೆರೂರು ಕ್ಷೇತ್ರದ ಕಬ್ಬಿಣಕಂತಿ ಮಠದ ಶಿವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಹಿರೇಕೆರೂರು ಕ್ಷೇತ್ರದ ಉಪಚುನಾವಣೆಗೆ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆದ ಬಳಿಕ ಮಾತನಾಡಿದ ಅವರು, ಸಿ.ಎಂ. ಯಡಿಯೂರಪ್ಪ ತಮ್ಮ ಪ್ರತಿನಿಧಿಯಾಗಿ ಪುತ್ರ ರಾಘವೇಂದ್ರನನ್ನು ಸಂಧಾನಕ್ಕೆ ಕಳಿಸಿದ್ದರು. ನಮ್ಮ ಗುರುಗಳು ಸಹ ರಾಜಕೀಯ ಕ್ಷೇತ್ರ ಸ್ವಾಮೀಜಿಗಳಿಗೆ ಸಾಧುವಲ್ಲ ಎಂದು ಮಾರ್ಗದರ್ಶನ ಮಾಡಿದರು. ಮಾಜಿ ಸಿಎಂ ಕುಮಾರಸ್ವಾಮಿ ಸಹ ಸಲಹೆ ನೀಡಿದರು. ಇವೆಲ್ಲದರ ಫಲವಾಗಿ ನಾನು ನಾಮಪತ್ರ ವಾಪಸ್ ಪಡೆದಿರುವದಾಗಿ ಸ್ವಾಮೀಜಿ ತಿಳಿಸಿದರು.
ಈ ಹಿಂದೆ ಮಠ ಹೇಗಿತ್ತೊ, ಅದೇ ರೀತಿ ಮಠ ಮುಂದುವರೆಸಿಕೊಂಡು ಹೋಗುವೆ, ಪಕ್ಷಾತೀತವಾಗಿರುವೆ ಎಂದು ತಿಳಿಸಿದರು. ಎಲ್ಲಾ ಮುಖಂಡರು ನಮ್ಮ ಆಶೋತ್ತರಗಳಿಗೆ ಸ್ಪಂದಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಾಗಿ ನಾಮಪತ್ರ ವಾಪಸ್ ಪಡೆದಿರುವುದಾಗಿ ಸ್ವಾಮೀಜಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿದ್ದರು.