ಕರ್ನಾಟಕ

karnataka

ETV Bharat / state

ದೇಶ ವಿರೋಧಿಗಳು ನನ್ನನ್ನು ಟಾರ್ಗೆಟ್ ಮಾಡಿದ್ದಕ್ಕೆ ಹೆಮ್ಮೆ ಅನಿಸುತ್ತದೆ : ಚಕ್ರವರ್ತಿ ಸೂಲಿಬೆಲೆ - ಚಕ್ರವರ್ತಿ ಸೂಲಿಬೆಲೆ

ದೇಶವನ್ನು ಅಸ್ಥಿರಗೊಳಿಸುವಂತ ಹಾಗೂ ತುಂಡು, ತುಂಡು ಮಾಡುವಂತಹ ವ್ಯಕ್ತಿಗಳು ನನಗೆ ಕೊಲೆ ಮಾಡುತ್ತಾರೆ ಎಂಬುದು ಆಶ್ಚರ್ಯಕರ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

Chakravarthi sulubele
ಚಕ್ರವರ್ತಿ ಸೂಲಿಬೆಲೆ

By

Published : Jan 17, 2020, 4:25 PM IST

ಹಾವೇರಿ: ದೇಶ ದ್ರೋಹಿಗಳು ಹಾಗೂ ದೇಶ ವಿರೋಧಿಗಳು ನನ್ನನ್ನು ಹತ್ಯೆ ಮಾಡಲು ಟಾರ್ಗೆಟ್ ಮಾಡಿರುವುದಕ್ಕೆ ಹೆಮ್ಮೆ ಅನಿಸುತ್ತದೆ ಎಂದು ಖ್ಯಾತ ವಾಗ್ಮಿ ಮತ್ತು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ

ನಗರದ ವಿವೇಕಾನಂದ ಆಶ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶವನ್ನು ಅಸ್ಥಿರಗೊಳಿಸುವಂತಹ ಹಾಗೂ ತುಂಡು, ತುಂಡು ಮಾಡುವಂತಹ ವ್ಯಕ್ತಿಗಳು ನನಗೆ ಕೊಲೆ ಮಾಡುತ್ತಾರೆ ಎಂಬುದು ಆಶ್ಚರ್ಯಕರ. ಇಂದು ಪೋಲಿಸ್​ ಇಲಾಖೆ ಸೂಕ್ಷ್ಮವಾಗಿ ಆರು ಜನರನ್ನು ಬಂಧಿಸಿದ್ದಾರೆ. ಅಂದು ನಡೆದ ಘಟನೆಯನ್ನ ಸಹ ಪೊಲೀಸ್ ಕಮಿಷನರ್​ಗೆ ತಿಳಿಸಿದ್ದೆ ಎಂದರು.

ದೇಶದಲ್ಲಿ ಶಾಂತಿ, ಸುವ್ಯವಸ್ಥೆ ತೆಗೆದುಕೊಂಡು ಹೋಗುವಂತದ್ದು ಹಿಂದೂ ಸಮಾಜ ಪರವಾಗಿ ಹೋರಾಟ ಮಾಡಿದರೆ ಕೊಲೆ ಬೆದರಿಕೆಗಳು ಹೆಚ್ಚಾಗುತ್ತಿವೆ. ಇಂತವರನ್ನು ಸರ್ಕಾರ ಸೂಕ್ತವಾಗಿ ವಿಚಾರಿಸಿಕೊಳ್ಳಬೇಕು. ದೇಶದಲ್ಲಿ ಇಂತಹ ಕೊಲೆಗಾರರ ಎಸ್​ಡಿಪಿಐ ಹಾಗೂ ಕರ್ನಾಟಕದಲ್ಲಿ ಐಸಿಸ್ ನಂತಹ ಉಗ್ರ ಸಂಘಟನೆ ನಿರ್ಮಾಣ ಮಾಡಬೇಕು‌ ಎಂಬ ಕನಸು ಇದೆ. ಆದರೆ ಇಂತಹ ಸಂಘಟನೆಗಳು ಹತ್ತಿಕ್ಕಲು ಅಡ್ಡಗಾಲು ಆಗಿದ್ದೇವೆ ನಾವು ಎಂದರು.

ನಮ್ಮ ಅಕ್ಕನಿಗೆ ಕಲ್ಲು ಬಿದ್ದ ವಿಚಾರ ಹೇಳಿದ್ದೆ. ಅಪ್ಪ, ಅಮ್ಮಾಗೆ ಹೇಳಿರಲಿಲ್ಲಾ. ಕೊನೆ ಉಸಿರು ಇರೋವರೆಗೂ ನಾನು ಹೇಗೆ ಸತ್ತರೂ ರಾಷ್ಟ್ರಕ್ಕಾಗೆ ಸಾಯುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.

ABOUT THE AUTHOR

...view details