ಕರ್ನಾಟಕ

karnataka

ETV Bharat / state

ಪ್ರತಿಪಕ್ಷದ ಸ್ಥಾನಕ್ಕೆ ಲಾಬಿ ಮಾಡೋದಿಲ್ಲ,ಅದ್ರ ಅವಶ್ಯಕತೆಯೂ ನನಗಿಲ್ಲ: ಹೆಚ್.ಕೆ.ಪಾಟೀಲ್ - Congress MLA HK Patil

ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಪಕ್ಷದ ಸ್ಥಾನಕ್ಕೆ ನಾನು ಲಾಬಿ ನಡೆಸುವುದಿಲ್ಲ ಎಂದು ಕಾಂಗ್ರೆಸ್​ ಶಾಸಕ ಹೆಚ್.ಕೆ.ಪಾಟೀಲ್​ ತಿಳಿಸಿದ್ದಾರೆ.

ವಿರೋಧ ಪಕ್ಷದ ಸ್ಥಾನಕ್ಕೆ ನಾನು ಲಾಭಿ ಮಾಡುವುದಿಲ್ಲ...ಹೆಚ್.ಕೆ.ಪಾಟೀಲ್ ಸ್ಪಷ್ಟನೆ

By

Published : Sep 13, 2019, 12:30 PM IST

Updated : Sep 13, 2019, 7:16 PM IST

ರಾಣೆಬೆನ್ನೂರು: ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಪಕ್ಷದ ಸ್ಥಾನಕ್ಕೆ ನಾನು ಲಾಬಿ ಮಾಡುವುದಿಲ್ಲ ಎಂದು ಕಾಂಗ್ರೆಸ್​ ಶಾಸಕ ಹೆಚ್.ಕೆ.ಪಾಟೀಲ್​ ತಿಳಿಸಿದ್ದಾರೆ.

ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈಗಾಗಲೇ ನನಗೆ ಎಲ್ಲಾ ಸ್ಥಾನಮಾನಗಳನ್ನು ನೀಡಿದೆ. ಎರಡು ಬಾರಿ ಪ್ರತಿಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ಈಗ ಮತ್ತೆ ಮಾಡಬೇಕು ಎಂಬ ಆಸೆಯಿಲ್ಲ. ಆದರೂ ಪಕ್ಷದ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿ ಪಕ್ಷದ ನಾಯಕರಾಗುತ್ತಾರೆ ಎಂಬುದು ಹೈಕಮಾಂಡ್​ಗೆ ಬಿಟ್ಟ ವಿಚಾರ ಎಂದರು.

ವಿರೋಧ ಪಕ್ಷದ ಸ್ಥಾನಕ್ಕೆ ನಾನು ಲಾಬಿ ಮಾಡುವುದಿಲ್ಲ- ಹೆಚ್.ಕೆ.ಪಾಟೀಲ್

ಡಿ.ಕೆ.ಶಿವಕುಮಾರ್​ ವಿರುದ್ಧ ಬಿಜೆಪಿ ರಾಜಕೀಯ ಸೇಡು ತೀರಿಸಿಕೊಳ್ಳಲು ಜಾರಿ ನಿರ್ದೇಶನಾಲಯವನ್ನು ಬಿಟ್ಟಿದ್ದಾರೆ. ಪ್ರಕರಣದಲ್ಲಿ ಅವರು ಖುಲಾಸೆಯಾಗಿ ಬರುತ್ತಾರೆ ಎಂದು ಹೇಳಿದ್ರು.

Last Updated : Sep 13, 2019, 7:16 PM IST

ABOUT THE AUTHOR

...view details