ಹಾವೇರಿ : ನಾನು ಸದಾ ಸಿಎಂ ಜೊತೆ ಇದ್ದೇನೆ, ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ ನನಗೂ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಿದೆ ಎಂದು ಬಿಜೆಪಿ ಶಾಸಕ ನೆಹರು ಓಲೇಕಾರ ಹೇಳಿಕೆ ನೀಡಿದ್ದಾರೆ.
ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ: ನೆಹರು ಓಲೇಕಾರ - ಸಚಿವ ಸಂಪುಟ ವಿಸ್ತರಣೆ
ನಾನು ಸಿಎಂ ಬಿ.ಎಸ್.ಯಡಿಯೂರಪ್ಪನವರ ಆತ್ಮಿಯ, ಸದಾ ಅವರ ಜೊತೆಗೆ ಇರುತ್ತೇನೆ. ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದೆ ಎಂದು ಬಿಜೆಪಿ ಶಾಸಕ ನೆಹರು ಓಲೇಕಾರ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಶಾಸಕ ನೆಹರು ಒಲೇಕಾರ
ನಗರದಲ್ಲಿ ಮಾತನಾಡಿದ ಅವರು, ನಾನು ಸಿಎಂ ಬಿ. ಎಸ್. ಯಡಿಯೂರಪ್ಪನವರ ಆತ್ಮೀಯ, ಸದಾ ಅವರ ಜೊತೆಗೆ ಇರುತ್ತೇನೆ. ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದೆ. ಇದುವರೆಗೂ ಬೆಂಗಳೂರಿಗೆ ಕರೆದಿಲ್ಲ, ಕರೆಯನ್ನು ಕೂಡಾ ಮಾಡಿಲ್ಲ ಎಂದು ಅವರು ಅಸಮಾಧಾನ ತೋರಿಸಿದ್ರು.
ಅಲ್ಲದೇ ಸಚಿವ ಸ್ಥಾನದ ನೀಡುವ ಕುರಿತು ಮಾತನಾಡಿಲ್ಲ. ನಿರೀಕ್ಷೆ ಹುಸಿಯಾದ್ರೆ ಕಾದು ನೋಡೋಣ. ನಾಳೆ ಸಿಎಂರನ್ನು ಭೇಟಿಯಾಗಲು ಬೆಂಗಳೂರಿಗೆ ತೆರಳುತ್ತಿದ್ದೇನೆ ಎಂದು ಹೇಳಿದ್ದರು.