ಕರ್ನಾಟಕ

karnataka

ETV Bharat / state

ಹಾವೇರಿ: ವಿದ್ಯುತ್ ತಂತಿ ತಗುಲಿ ಗುಡಿಸಲು ಭಸ್ಮ - ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮ

ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಗುಡಿಸಲು ಭಸ್ಮವಾಗಿದ್ದು, ನಗದು, ಬೆಳ್ಳಿ, ಬಂಗಾರ, ದಿನಸಿ ವಸ್ತುಗಳು ಹಾಗೂ ಬಟ್ಟೆ ಎಲ್ಲವೂ ಸುಟ್ಟು ಕರಕಲಾಗಿವೆ.

hut burn by the power circuit at Haveri
ವಿದ್ಯುತ್ ತಂತಿ ತಗುಲಿ ಗುಡಿಸಲು ಭಸ್ಮ

By

Published : Apr 29, 2020, 1:03 PM IST

ಹಾವೇರಿ: ವಿದ್ಯುತ್ ತಂತಿ ತಗುಲಿ ಗುಡಿಸಲು ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್ ಗುಡಿಸಲಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೀಲಪ್ಪ ಕೋಡಬಾಳ ಎಂಬುವರಿಗೆ ಸೇರಿದ ಗುಡಿಸಲು ಇದಾಗಿದ್ದು, ನಗದು, ಬೆಳ್ಳಿ, ಬಂಗಾರ, ದಿನಸಿ ವಸ್ತುಗಳು ಹಾಗೂ ಬಟ್ಟೆ ಸೇರಿದಂತೆ ಎಲ್ಲವೂ ಸುಟ್ಟು ಕರಕಲಾಗಿವೆ.

ವಿದ್ಯುತ್ ತಂತಿ ತಗುಲಿ ಗುಡಿಸಲು ಭಸ್ಮ...

ಬೆಂಕಿ ಕಾಣಿಸಿಕೊಳ್ತಿದ್ದಂತೆ ಗುಡಿಸಲಲ್ಲಿದ್ದ ಜನ ಹೊರಗೆ ಓಡಿ ಬಂದಿದ್ದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. ಗುಡಿಸಲಿನ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದು, ಇದರಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details