ಕರ್ನಾಟಕ

karnataka

ETV Bharat / state

ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ: ಮಾರಕಾಸ್ತ್ರದಿಂದ ಕೊಚ್ಚಿ ಕೊಂದ ಪತಿ - ಹಾವೇರಿ

ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ನಡೆದಿದೆ. ಹಿನಾಕೌಸರ್ ಕೊಲೆಯಾದ ಮಹಿಳೆಯಾಗಿದ್ದು ಅವಳ ಪತಿ ಮುಸ್ತಾಕ್ ಮಹ್ಮದ್​ನಿಂದ ಕೊಲೆಯಾಗಿದ್ದಾಳೆ.

ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

By

Published : Jun 17, 2019, 8:36 PM IST

ಹಾವೇರಿ:ಪತಿಯೇ ಪತ್ನಿಯನ್ನ ಮಾರಾಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆದಿದೆ.

30 ವರ್ಷದ ಹಿನಾಕೌಸರ್ ಕೊಲೆಯಾದ ಮಹಿಳೆಯಾಗಿದ್ದು, ಅವಳ ಪತಿ ಮುಸ್ತಾಕ್ ಮಹ್ಮದ್(35) ಕೊಲೆ ಆರೋಪಿ. ಮುಸ್ತಾಕ್​ ಮಹ್ಮದ್ ಕ್ಷುಲ್ಲಕ ಕಾರಣಕ್ಕೆ ಹಿನಾಕೌಸರ್ ಕೊಲೆ ಮಾಡಿದ್ದು, ಇದೀಗ ಪೊಲೀಸರ ವಶದಲ್ಲಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಎಎಸ್ಪಿ ಮಲ್ಲಿಕಾರ್ಜುನ್ ಮಾಲ್ದಂಡೆ, ಸಿಪಿಐ ಭಾಗ್ಯವಂತಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾಗಿನೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಿನಾಕೌಸರ್ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ.

ಮಾರಕಾಸ್ತ್ರಗಳಿಂದ ಕೊಂದ ಪತಿ

ABOUT THE AUTHOR

...view details