ಹಾವೇರಿ : ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬಡಸಂಗಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದೀಗ ಆತಂಕದಲ್ಲಿ ಜೀವನ ಕಳೆಯುತ್ತಿದ್ದಾರೆ. ಇವರ ಆತಂಕಕ್ಕೆ ಕಾರಣ ಗ್ರಾಮದ ಸಮೀಪ ಹರಿದುಹೋಗಿರುವ ಕುಮದ್ವತಿ ನದಿಯಲ್ಲಿ ಬೃಹದಾಕಾರದ ಮೊಸಳೆ ಪತ್ತೆಯಾಗಿರುವುದು.
ಈ ಮೊಸಳೆಯಿಂದಾಗಿ ಬಡಸಂಗಾಪುರ, ಕುಡುಪಲಿ, ಯಡಗೋಡ, ಹಿರೇಮಾದಾಪುರ ಹಾಗೂ ಸಣ್ಣಗುಬ್ಬಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮೊಸಳೆ ಕಾಣಿಸಿಕೊಂಡು 40 ದಿನಗಳಾಗಿದ್ದು, ಅರಣ್ಯ ಇಲಾಖೆ ಎಚ್ಚರಿಕೆ ಫಲಕ ಹಾಕಿದ್ದು ಬಿಟ್ಟರೆ ಬೇರೇನು ಮಾಡಿಲ್ಲಾ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.
ಮೊಸಳೆಯ ಕಾರಣ ನದಿ ತಟದ ಜಮೀನಿಗೆ ಬರಲು ಸಹ ರೈತರು ಹೆದರುತ್ತಿದ್ದಾರೆ. ದನಕರುಗಳ ಮೈತೊಳೆಯಲು, ನೀರು ಕುಡಿಸಲು ರೈತರು ಭಯಪಡುತ್ತಿದ್ದಾರೆ. ಹೆಣ್ಮಕ್ಕಳು ಬಟ್ಟೆ ತೊಳೆಯಲು ನದಿಗೆ ಬರುತ್ತಿಲ್ಲ.