ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು ಕೆಲವೆಡೆ ಸಮಸ್ಯೆ ತಲೆದೋರಿದೆ. ಮಳೆಗೆ ಮನೆ ಗೋಡೆ ತೇವಗೊಂಡು ಕುಸಿದು ಬಿದ್ದ ಘಟನೆ ಹಾನಗಲ್ ಪಟ್ಟಣದ ರಜಪೂತ ಗಲ್ಲಿಯಲ್ಲಿ ನಡೆದಿದೆ.
ಪ್ರಕಾಶ ಹಳಕೋಟಿ ಎಂಬುವವರಿಗೆ ಸೇರಿದ ಮನೆ ಗೋಡೆಗಳು ನೆನೆದು ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ಮಾಲೀಕರು ಬಾಡಿಗೆಗಿದ್ದ ಲೋಹಿತ ಅರ್ಕಸಾಲಿ ಎಂಬ ವ್ಯಕ್ತಿಗೆ ಸೂಚಿಸಿ ಮನೆ ಖಾಲಿ ಮಾಡಿಸಿದ್ದರು. ಗೋಡೆ ಕುಸಿದು ಬೀಳುವ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ.