ಕರ್ನಾಟಕ

karnataka

ETV Bharat / state

ಮನೆ ಕುಸಿದು 1 ವರ್ಷವಾದರೂ ಸಿಗದ ಪರಿಹಾರ: ಅಳಲು ತೋಡಿಕೊಂಡ ವೃದ್ಧೆ - ಭಾರೀ ಮಳೆಗೆ ಮನೆ ಕುಸಿತ

2019ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರ ಗ್ರಾಮದ ಪಾರವ್ವ ಮಲ್ಲೂರ ಎಂಬುವರ ಮನೆ ಸಂಪೂರ್ಣ ಬಿದ್ದಿದೆ. ಆದ್ರೆ ಈವರೆಗೂ ಪರಿಹಾರ ಸಿಕ್ಕಿಲ್ಲವೆಂದು ವೃದ್ಧೆ ಅಳಲು ತೋಡಿಕೊಂಡಿದ್ದಾರೆ.

House collapses: appeals for relief
ಭಾರೀ ಮಳೆಯಿಂದ ಮನೆ ನಾಶ: ವರ್ಷವಾದರೂ ಸಿಗದ ಪರಿಹಾರ

By

Published : Sep 6, 2020, 3:37 PM IST

ಹಾವೇರಿ: ಕಳೆದ 2019ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಸಂಪೂರ್ಣ ಮನೆ ನೆಲಸಮ ಆಗಿದ್ರೂ ಈವರೆಗೆ ಪರಿಹಾರ ದೊರೆತಿಲ್ಲ.

ಭಾರೀ ಮಳೆಯಿಂದ ಬಿದ್ದ ಮನೆ: ವರ್ಷವಾದರೂ ಸಿಗದ ಪರಿಹಾರ

ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರ ಗ್ರಾಮದ ಪಾರವ್ವ ಮಲ್ಲೂರ ಎಂಬುವರ ಮನೆ ಮಳೆಗೆ ಸಂಪೂರ್ಣ ಬಿದ್ದಿದೆ. ಮನೆ ಹಾನಿಯಾಗಿರೋ ಬಗ್ಗೆ ಸಾಕಷ್ಟು ಬಾರಿ ಗ್ರಾಮ ಪಂಚಾಯತ್​ನಿಂದ ಹಿಡಿದು ತಾಲೂಕು ಕಚೇರಿವರೆಗೆ ಅರ್ಜಿ ಸಲ್ಲಿಸಿದ್ರೂ ಈವರೆಗೆ ಯಾವುದೇ ಪರಿಹಾರ ದೊರೆತಿಲ್ಲ.

ಆದಷ್ಟು ಬೇಗ ಅಧಿಕಾರಿಗಳು ಹಾನಿಗೊಳಗಾದ ಮನೆಗೆ ಪರಿಹಾರ ದೊರಕಿಸಿಕೊಡಬೇಕು ಎಂದು ವೃದ್ಧೆ ಪಾರವ್ವ ಒತ್ತಾಯಿಸಿದ್ದಾರೆ.

ABOUT THE AUTHOR

...view details