ಹಾವೇರಿ:ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮತ್ತೆ ಶುರುವಾಗಿದ್ದು, ಧಾರಾಕಾರ ಮಳೆಗೆ ಮನೆಗಳು ಕುಸಿದು ಬೀಳಲಾರಂಭಿಸಿವೆ. ಮನೆ ಕುಸಿದು ಬೀಳುವ ವಿಡಿಯೋಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿವೆ.
ಹಾವೇರಿಯಲ್ಲಿ ಮಳೆಗೆ ಧರೆಗುರುಳಿದ ಮನೆ... ವಿಡಿಯೋ ನೋಡಿ - ಮೊಬೈಲ್ ನಲ್ಲಿ ಸೆರೆಯಾಯ್ತು ಮನೆಗಳ ಕುಸಿತ
ಹಾವೇರಿ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮತ್ತೆ ಶುರುವಾಗಿದ್ದು, ಧಾರಾಕಾರ ಮಳೆಗೆ ಮನೆಗಳು ಕುಸಿದು ಬೀಳಲಾರಂಭಿಸಿವೆ. ಮನೆ ಕುಸಿದು ಬೀಳುವ ವಿಡಿಯೋಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿವೆ.
ಮಳೆಯಿಂದಾಗಿ ಮನೆಗಳು ಕುಸಿತಗೊಂಡಿರುವುದು
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಸವನಾಳ ಮತ್ತು ರಾಣೇಬೆನ್ನೂರು ತಾಲೂಕಿನ ವೈ.ಟಿ. ಹೊನ್ನತ್ತಿ ಗ್ರಾಮದಲ್ಲಿ ತಲಾ ಒಂದೊಂದು ಮನೆಗಳು ಕುಸಿದಿವೆ. ಬಸವನಾಳ ಗ್ರಾಮದಲ್ಲಿ ಸುರೇಶ ತಳವಾರ ಎಂಬುವರ ಮನೆ ಕುಸಿತವಾಗಿದ್ದರೆ, ವೈ.ಟಿ. ಹೊನ್ನತ್ತಿ ಗ್ರಾಮದಲ್ಲಿ ಗಂಗಮ್ಮ ಕುಲಕರ್ಣಿ ಎಂಬುವರಿಗೆ ಸೇರಿದ ಮನೆ ಕುಸಿತಗೊಂಡಿದೆ.
ನಿರಂತರ ಮಳೆಗೆ ಸಾಕಷ್ಟು ಮನೆಗಳು ಕುಸಿತಗೊಂಡಿದ್ದು, ಬೀಳೋ ಸ್ಥಿತಿಯಲ್ಲಿ ಇದ್ದ ಮನೆಗಳನ್ನು ಈಗಾಗಲೇ ಜನರು ಖಾಲಿ ಮಾಡಿದ್ದರಿಂದ ಅನಾಹುತಗಳು ತಪ್ಪಿವೆ ಎನ್ನಲಾಗಿದೆ.