ಹಾವೇರಿ: ಜನನಿಬಿಡ ಪ್ರದೇಶದಲ್ಲಿರುವ ಮನೆಯಲ್ಲಿ ಕಳ್ಳತನವಾಗಿದೆ. ನಗರದ ಹೃದಯಭಾಗದಲ್ಲಿರುವ ಯಾಲಕ್ಕಿ ಓಣಿಯ ರವಿ ಜೈನ್ ಎಂಬುವವರ ಮನೆಯಲ್ಲಿ ಕಳ್ಳರು ಕಳೆದ ರಾತ್ರಿ ಕಳ್ಳತನ ಮಾಡಿದ್ದಾರೆ.
ರವಿ ತಮ್ಮ ಸಂಬಂಧಿಕರನ್ನು ದಾವಣಗೆರೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ತಿಜೋರಿಯಲ್ಲಿರುವ 400 ಗ್ರಾಂ ಚಿನ್ನ ಮತ್ತು 8 ಕೆಜಿ ಬೆಳ್ಳಿಯನ್ನು ಕಳ್ಳರು ಕದ್ದೊಯ್ದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಶಹರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಆಗಮಿಸಿ ಕಳ್ಳರ ಜಾಡು ಹಿಡಿಯುವ ಪ್ರಯತ್ನ ಮಾಡಲಾಯಿತು. ಸ್ಥಳಕ್ಕೆ ಹಾವೇರಿ ಪ್ರಭಾರಿ ಎಸ್ಪಿ ಪರಶುರಾಮ್ ಬಾಲ್ದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಯಲ್ಲಿರುವ ಆದಾಯವೆಲ್ಲ ಕಳ್ಳತನವಾಗಿರುವುದಕ್ಕೆ ರವಿ ಜೈನ್ ತೀವ್ರ ದುಃಖ ವ್ಯಕ್ತಪಡಿಸಿದರು.
ಓದಿ : ಲಂಚ ಪಡೆಯುತ್ತಿದ್ದ ಬಿಇಒ ಎಸಿಬಿ ಬಲೆಗೆ