ಹಾವೇರಿ : ಕಾಂಗ್ರೆಸ್‌ನವರ ಮನೆ ದೇವರ ಹೆಸರು ಸುಳ್ಳು. ಸಿದ್ದರಾಮಯ್ಯ ಸರ್ಕಾರದ ಯಾವ ಭಾಗ್ಯಗಳು ಕೂಡ ಜನರನ್ನ ತಲುಪ್ಲಿಲ್ಲ. ಆ ಸರ್ಕಾರವೇ ದೌರ್ಭಾಗ್ಯ ಆಗಿ ಹೋಯ್ತು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮುಳುಗ್ತಿರೋ ಹಡಗು. ಒಂದು ಕಡೆ ಡಿಕೆಶಿ ಕಂಡಕ್ಟರ್, ಸಿದ್ದರಾಮಯ್ಯ ಡ್ರೈವರ್. ಡಿಕೆಶಿ ಎಲ್ಲಿ ಸ್ಟಾಪ್ ಅಂತಾರೆ ಅಲ್ಲಿ ಸಿದ್ದರಾಮಯ್ಯ ಗಾಡಿ ಹೊಡೀತಾರೆ.
ಡಿಕೆಶಿ ಎಲ್ಲಿ ಗಾಡಿ ಹೊಡಿ ಅಂತಾರೆ ಅಲ್ಲಿ ಸಿದ್ದರಾಮಯ್ಯ ಸ್ಟಾಪ್ ಮಾಡ್ತಾರೆ. ಹೀಗಾಗಿ, ಬಸ್ ಹಿಂದೂ ಹೋಗಲ್ಲ, ಮುಂದೂ ಹೋಗಲ್ಲ. ನಿಂತಲ್ಲೇ ನಿಲ್ಲೋ ಬಸ್ ಕಾಂಗ್ರೆಸ್. ಕಾಂಗ್ರೆಸ್ ಬಸ್ಸಿನ ನಾಲ್ಕು ಚಕ್ರಗಳು ನಿಂತು ನಿಂತು ಪಂಕ್ಚರ್ ಆಗಿವೆ ಎಂದರು.