ಕರ್ನಾಟಕ

karnataka

ETV Bharat / state

14 ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕೆ; ಬೊಮ್ಮಾಯಿ ವಿಶ್ವಾಸ - ಲಾಕ್‍ಡೌನ್ ಸಂಪೂರ್ಣ ಯಶಸ್ವಿ

ಕೊರೊನಾ ಎರಡನೇ ಅಲೆ ಬಗ್ಗೆ ಜನರು ಹೊರಗಡೆ ಓಡಾಡೋವಾಗ ಗಂಭೀರವಾಗಿ ವಿಚಾರ ಮಾಡಬೇಕು. ಪೊಲೀಸ್ ಇಲಾಖೆ ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.

home-minister-basavaraj-bommyi-talk-about-corona-issue
ಬೊಮ್ಮಾಯಿ

By

Published : May 13, 2021, 5:34 PM IST

ಹಾವೇರಿ: ಹೋಂ ಐಸೋಲೇಶನ್​ನಲ್ಲಿದ್ದವರು ಏನಾದರೂ ತೊಂದರೆ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆಗೆ ಒಳಗಾಗಬೇಕು ಎಂದು ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಬೊಮ್ಮಾಯಿ

ಓದಿ: ರಾಣೆಬೆನ್ನೂರು ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ: ಅಧಿಕಾರಿಗಳ ಮೇಲೆ ಬೊಮ್ಮಾಯಿ ಗರಂ

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಆಕ್ಸಿಜನ್ ಮತ್ತು ಬೆಡ್​​ಗಳ ವಿಚಾರವಾಗಿ ಅಂಕಿ-ಅಂಶಗಳ ಮಾಹಿತಿ ನೀಡಿದರು. ಕೊರೊನಾ ಎರಡನೇ ಅಲೆ ಬಗ್ಗೆ ಜನರು ಹೊರಗಡೆ ಓಡಾಡೋವಾಗ ಗಂಭೀರವಾಗಿ ವಿಚಾರ ಮಾಡಬೇಕು. ಪೊಲೀಸ್ ಇಲಾಖೆ ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದೆ. ಮೊದಲನೇ ಅಲೆಯ ಸಮಯದಲ್ಲಿ ಉಪಚಾರದಿಂದ ಸಾವಿನ ದವಡೆಗೆ ಹೋಗದಂತೆ ತಡೆಗಟ್ಟಲು ಸಾಧ್ಯವಿತ್ತು. ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಇದು ನಮ್ಮ ಔಷಧಿಯನ್ನು ಮೀರಿಸುವಂತಿದೆ ಎಂದು ಅಭಿಪ್ರಾಯಪಟ್ಟರು.

ಕೊರೊನಾದ ಮಧ್ಯೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಎಲ್ಲ ಸ್ಥಿತಿ ಎದುರಿಸೋ ತರಬೇತಿ ಇರುತ್ತೆ. ಲಾಕ್‍ಡೌನ್‍ಗೆ ಜನರು ಸ್ವಯಂಪ್ರೇರಿತವಾಗಿ ಸಹಕಾರ ಕೊಡಬೇಕು. ಜನರ ಸಹಕಾರದಿಂದ ಲಾಕ್‍ಡೌನ್ ಸಂಪೂರ್ಣ ಯಶಸ್ವಿ ಆಗುತ್ತದೆ. ಹಗಲು ರಾತ್ರಿ ಎನ್ನದೆ ಆಕ್ಸಿಜನ್ ಪೂರೈಕೆ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ. ಹದಿನಾಲ್ಕು ದಿನಗಳ ನಂತರ ಇದರ ಫಲಿತಾಂಶ ಗೊತ್ತಾಗಲಿದೆ. ಕಡಿಮೆ ಆಗುತ್ತದೆ ಎಂಬ ವಿಶ್ವಾಸವಿದೆ, ತಜ್ಞರು ಕೂಡ ಅದನ್ನೆ ಹೇಳುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

ABOUT THE AUTHOR

...view details