ಹಾವೇರಿ: ಶಿಥಿಲಗೊಂಡಿರುವ ಸೇತುವೆ ಮೇಲೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪಯಣಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶಿಥಿಲ ಸೇತುವೆ ಮೇಲೆಯೇ ಗೃಹ ಸಚಿವ ಬೊಮ್ಮಾಯಿ ಪ್ರಯಾಣ ! - ಶಿಥಲಗೊಂಡಿರುವ ಸೇತುವೆ ವೀಕ್ಷಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಬಸವರಾಜ್ ಬೊಮ್ಮಾಯಿ ಹಾವೇರಿ ಸಮೀಪದ ಕುಣಿಮೆಳ್ಳಳ್ಳಿ ಬಳಿ ವರದಾ ನದಿಗೆ ಬ್ರಿಟಿಷರ ಕಾಲದಲ್ಲಿ ಕಟ್ಟಲಾದ, ಈಗ ಶಿಥಿಲಗೊಂಡಿರುವ ಸೇತುವೆ ಮೇಲೆ ಪಯಣಿಸಿದ್ದಾರೆ.
ಶಿಥಲಗೊಂಡಿರುವ ಸೇತುವೆ ವೀಕ್ಷಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಶನಿವಾರ ಹಾವೇರಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ನದಿಯ ಹರವು ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಕಳೆದ ಒಂದು ವರ್ಷದಿಂದ ಲೋಕೋಪಯೋಗಿ ಇಲಾಖೆ ಈ ಸೇತುವೆಯಲ್ಲಿ ಸಂಚಾರ ನಿಷೇಧಿಸಿದೆ. ಆದರೆ ಶನಿವಾರ ಸಚಿವ ಬಸವರಾಜ್ ಬೊಮ್ಮಾಯಿ ಸಂಚರಿಸುತ್ತಿದ್ದ ವೇಳೆ ಫಲಕಕ್ಕೆ ಬಟ್ಟೆ ಹಾಕಿ ಮುಚ್ಚಲಾಗಿತ್ತು. ಸಚಿವ ಬೊಮ್ಮಾಯಿ ಮತ್ತು ಇತರ ಜನಪ್ರತಿನಿಧಿಗಳು ಸೇತುವೆ ಮೇಲೆ ಸಾಗಿ ವರದಾ ನದಿ ಹರಿವಿನ ಪ್ರಮಾಣ ವೀಕ್ಷಣೆ ಮಾಡಿದರು.