ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಟ್ರ್ಯಾಕ್ಟರ್​ ಏರಿದ ಗೃಹ ಸಚಿವ ಬೊಮ್ಮಾಯಿ - Tractor Driving

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಟ್ರ್ಯಾಕ್ಟರ್​ ಓಡಿಸಿದರು.

Tractor Driving
ಟ್ರ್ಯಾಕ್ಟರ್ ಚಲಾಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ

By

Published : Jun 24, 2021, 8:03 AM IST

ಹಾವೇರಿ: ಟ್ರ್ಯಾಕ್ಟರ್​ ಓಡಿಸುವ ಮೂಲಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೃಷಿ ಅಭಿಯಾನ ಚಾಲನೆ ನೀಡಿದರು. ಜಿಲ್ಲೆಯ ಸವಣೂರು ತಾಲೂಕಿನ ಗುಂಡೂರು ಗ್ರಾಮದಲ್ಲಿ 2021-22 ಸಾಲಿನ ಕೃಷಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ ಟ್ರ್ಯಾಕ್ಟರ್ ಏರಿದ ಗೃಹ ಸಚಿವರು ಸುಮಾರು 100 ಮೀಟರ್ ಓಡಿಸುವ ಮೂಲಕ ಗಮನ ಸೆಳೆದರು. ಕೃಷಿ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು.

ಟ್ರ್ಯಾಕ್ಟರ್ ಚಲಾಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ನಂತರ ನಡೆದ ಕಾರ್ಯಕ್ರಮದಲ್ಲಿ ಸಚಿವ ಬೊಮ್ಮಾಯಿ ರೈತರ ಸಮಸ್ಯೆಗಳನ್ನು ಆಲಿಸಿದರು. ರೈತರ ಅಹವಾಲುಗಳನ್ನು ಕೇಳಲು ಈ ಯೋಜನೆ ಪ್ರಯೋಜನಕಾರಿಯಾಗಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಸಚಿವರು ಕರೆ ನೀಡಿದರು.

ಕೃಷಿ ಅಭಿಯಾನಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದರು

ಇದನ್ನೂಓದಿ: ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಮಾಜಿ ಸಿಎಂ ಅಭಿಮಾನಿ

ABOUT THE AUTHOR

...view details