ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಭಾರಿ ಮಳೆ: ಐತಿಹಾಸಿಕ ಕೋಳೂರು ಬಸವೇಶ್ವರ ದೇವಸ್ಥಾನದ ಗೋಡೆ ಕುಸಿತ - ಈಟಿವಿ ಭಾರತ ಕನ್ನಡ

ಹಾವೇರಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಕೋಳೂರು ಗ್ರಾಮದ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಗೋಡೆ ಕುಸಿದಿದೆ.

historic-koluru-basaveshwara-temple-wall-collapsed
ಹಾವೇರಿಯಲ್ಲಿ ಭಾರಿ ಮಳೆ: ಐತಿಹಾಸಿಕ ಕೋಳೂರು ಬಸವೇಶ್ವರ ದೇವಸ್ಥಾನದ ಗೋಡೆ ಕುಸಿತ

By

Published : Oct 23, 2022, 10:27 AM IST

Updated : Oct 23, 2022, 1:09 PM IST

ಹಾವೇರಿ:ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಕೋಳೂರು ಗ್ರಾಮದ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಹಿಂಭಾಗದ ಗೋಡೆ ಕುಸಿದು ಬಿದ್ದಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

ದೇವಸ್ಥಾನದ ಒಳಭಾಗದಲ್ಲಿನ ಕೆಲವು ದೇವರ ಮೂರ್ತಿಗಳು ಮಣ್ಣಿನಲ್ಲಿ ಮುಚ್ಚಿ ಹೋಗಿವೆ. ಆದಷ್ಟು ಬೇಗ ಸರ್ಕಾರ ಹಾಗೂ ಜಿಲ್ಲಾಡಳಿತ ಕುಸಿತಗೊಂಡಿರುವ ದೇವಸ್ಥಾನದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಐತಿಹಾಸಿಕ ಕೋಳೂರು ಬಸವೇಶ್ವರ ದೇವಸ್ಥಾನದ ಗೋಡೆ ಕುಸಿತ

ಬಸವೇಶ್ವರ ದೇವಸ್ಥಾನವು 11ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಇದು ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ವರದಾ ನದಿ ತಟದಲ್ಲಿರುವ ದೇವಸ್ಥಾನವು ಹಲವು ಐತಿಹಾಸಿಕ ಪುರಾವೆಗಳನ್ನು ಹೊಂದಿದೆ. ಇಲ್ಲಿರುವ ಬೃಹದಾಕಾರದ ನಂದಿ ವಿಗ್ರಹ ಪ್ರಮುಖ ಆಕರ್ಷಣೆಯಾಗಿದೆ.

ಇದನ್ನೂ ಓದಿ:ಸಾಂಸ್ಕೃತಿಕ ನಗರಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ.. ಮಹಾರಾಣಿ ಕಾಲೇಜಿನ ಕಟ್ಟಡ ಕುಸಿತ

Last Updated : Oct 23, 2022, 1:09 PM IST

ABOUT THE AUTHOR

...view details