ಕರ್ನಾಟಕ

karnataka

ETV Bharat / state

ಕಬ್ಬಿಣಕಂತಿಮಠ ಸ್ವಾಮೀಜಿ ಭೇಟಿ ಮಾಡಿದ ಸಂಸದ ರಾಘವೇಂದ್ರ

ಹಿರೇಕೆರೂರು ಉಪಚುನಾವಣೆಯ ಜೆಡಿಎಸ್​​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸ್ವಾಮೀಜಿ ನಾಮಪತ್ರ ಹಿಂಪಡೆಯಲು ತೀರ್ಮಾನಿಸಿದ್ದಾರೆ.

ಹಿರೇಕೆರೂರು ಜೆಡಿಎಸ್​​ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ನಿರ್ಧಾರ

By

Published : Nov 20, 2019, 4:13 PM IST

ಹಾವೇರಿ: ಜಿಲ್ಲೆಯ ಹಿರೇಕೆರೂರು ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸ್ವಾಮೀಜಿ ನಾಮಪತ್ರ ವಾಪಸ್​​ ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ.

ಹಿರೇಕೆರೂರು ಜೆಡಿಎಸ್​​ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ನಿರ್ಧಾರ

ಸ್ವಾಮೀಜಿ ನಿರ್ಧಾರಕ್ಕೆ ಹಲವು ಪೀಠಾಧಿಪತಿಗಳು ಮತ್ತು ರಾಜಕೀಯ ನಾಯಕರ ಕೈವಾಡವಿದೆ ಎಂಬ ಆರೋಪಗಳು ಕೇಳಲಾಂಬಿಸಿವೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಕಾಣಿಸಲಾರಂಭಿಸಿವೆ.

ಹಿರೇಕೆರೂರು ಜೆಡಿಎಸ್​​ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ನಿರ್ಧಾರ

ಖುದ್ದು ಸಿಎಂ ಬಿಎಸ್​​ವೈ ಪುತ್ರ ಬಿ.ವೈ ರಾಘವೇಂದ್ರ ಹಾಗೂ ರಂಭಾಪುರಿ ಪೀಠದ ಉಜ್ಜೈನಿ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಭಾಗಿಯಾಗಿದ್ದ ಫೋಟೋಗಳು ಹರಿದಾಡತೊಡಗಿವೆ. ಈ ಪೋಟೋಗಳಿಂದ ಸ್ವಾಮೀಜಿ ನಾಮಪತ್ರ ವಾಪಸಾತಿಯಲ್ಲಿ ಮಠಾಧೀಶರು ಮತ್ತು ರಾಜಕಾರಣಿಗಳ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.‌ ಇವರ ಒತ್ತಡದಿಂದಲೇ ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ ನಾಮಪತ್ರ ಹಿಂಪಡೆಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.

For All Latest Updates

TAGGED:

photo

ABOUT THE AUTHOR

...view details