ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕು ಪಿಎಫ್ಐ ಸಂಘಟನೆಯ ತಾಲೂಕು ಅಧ್ಯಕ್ಷನನ್ನು ಬಂಧಿಸಲಾಗಿದೆ. ಹಿರೇಕೆರೂರು ಠಾಣೆ ಪೊಲೀಸರು ಪಿಎಫ್ಐ ಸಂಘಟನೆ ತಾಲೂಕಾಧ್ಯಕ್ಷ ರಬ್ಬಾನಿ ಲೋಹಾರ (29) ಬಂಧಿತ ಆರೋಪಿ.
ಮುಂಜಾಗ್ರತಾ ಕ್ರಮವಾಗಿ ರಬ್ಬಾನಿಯನ್ನು ಬಂಧಿಸಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ. ಪಟ್ಟಣದ ಬಸವೇಶ್ವರ ನಗರದ ಮೂರನೇ ಕ್ರಾಸ್ನಲ್ಲಿರೋ ನಿವಾಸದಲ್ಲಿದ್ದ ವೇಳೆ ಅವರನ್ನು ಅರೆಸ್ಟ್ ಮಾಡಲಾಗಿದೆ.