ಹಾವೇರಿ :ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿದಿರುವ ಘಟನೆ ತಾಲೂಕಿನ ಕೂರಗುಂದದಲ್ಲಿ ನಡೆದಿದೆ. ಮಾಲತೇಶ್ ಹರಿಜನ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ. ಮನೆಯೊಳಗೆ ಕಳೆದ ರಾತ್ರಿ ಸುರಿದ ಮಳೆ ನೀರು ನಿಂತು ಈ ಅವಘಡ ಸಂಭವಿಸಿದೆ. ಅಲ್ಲದೆ ಮಳೆ ನೀರು ಮನೆ ಹೊಕ್ಕಿದ್ದರಿಂದ ಮನೆಯಲ್ಲಿರುವ ವಸ್ತುಗಳೆಲ್ಲಾ ನೀರಲ್ಲಿ ನಿಂತಿವೆ.
ಹಾವೇರಿ ಜಿಲ್ಲೆಯಲ್ಲಿ ಭಾರೀ ಮಳೆ.. ಧರೆಗುರುಳಿದ ಮನೆ, ಬಾಳೆ, ಅಡಿಕೆ ಮರಗಳು.. - ಹಾವೇರಿ ಭಾರಿ ಮಳೆ ಸುದ್ದಿ
ಬಾಳೆ, ಅಡಿಕೆ ಮರಗಳು ಧರೆಗುರುಳಿವೆ. ವರುಣನ ಆರ್ಭಟಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಳೆಗಳು ಮಣ್ಣುಪಾಲಾಗಿವೆ. ಕಳೆದ ರಾತ್ರಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಹಲವೆಡೆ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ..
ಧರೆಗುರುಳಿದ ಮನೆ, ಬಾಳೆ, ಅಡಿಕೆ ಮರಗಳು
ಬಸಾಪುರ ಗ್ರಾಮದಲ್ಲಿ ಮಳೆಯಿಂದಾಗಿ ಪ್ರಶಾಂತ ಚಾವಡಿ ಎಂಬುವರಿಗೆ ಸೇರಿದ ಬಾಳೆ ಅಡಿಕೆ ಮರಗಳು ಧರೆಗುರುಳಿವೆ. ವರುಣನ ಆರ್ಭಟಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಳೆಗಳು ಮಣ್ಣುಪಾಲಾಗಿವೆ. ಕಳೆದ ರಾತ್ರಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಹಲವೆಡೆ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ.