ಕರ್ನಾಟಕ

karnataka

ETV Bharat / state

ಮುಂದುವರಿದ ವರುಣನ ಆರ್ಭಟ...ಮನೆಗೆ ನುಗ್ಗಿದ ನೀರು - ಮನೆಗೆ ನುಗ್ಗಿದ ನೀರು

ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಹಾನಗಲ್ ಮತ್ತು ಬಂಕಪುರ ಪಟ್ಟಣದ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತ ಸೃಷ್ಟಿಸಿದೆ.

heavy-rain-in-haveri-water-rushed-home

By

Published : Aug 9, 2019, 3:29 AM IST

ಹಾವೇರಿ:ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ರಾತ್ರಿಯೂ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಹಾನಗಲ್ ಮತ್ತು ಬಂಕಪುರ ಪಟ್ಟಣದ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ನೀರು ಹೊರಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ.

ಮನೆಗೆ ನುಗ್ಗಿದ ನೀರನ್ನು ಹೊರಗೆ ಹಾಕಲಾಗುತ್ತಿದೆ

ನೀರು ನುಗ್ಗಿರುವ ಪರಿಣಾಮ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮನೆಯಲ್ಲಿರುವ ಸಾಮಗ್ರಿಗಳು ಹಾಳಾಗಿವೆ. ಮತ್ತೊಂದೆಡೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕುರಬರಮಲ್ಲೂರ ಗ್ರಾಮದ ಸಮೀಪವಿರುವ ಬಾಜಿರಾಯನ ಹಳ್ಳದ ನೀರು ಗ್ರಾಮಕ್ಕೆ ಪ್ರವೇಶಿಸುತ್ತಿದೆ. ಹೀಗಾಗಿ ಜನರು ಭೀತಿಯಲ್ಲಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ವಿ.ಡಿ.ಸಜ್ಜನ ಅವರು ಪರಿಶೀಲನೆ ನಡೆಸಿ ಸುರಕ್ಷಿತ ಸ್ಥಳಕ್ಕೆ ಅಥವಾ ಪರಿಹಾರ ಕೇಂದ್ರಗಳಿಗೆ ತೆರಳುವಂತೆ ಹೇಳಿದ್ದಾರೆ.

ABOUT THE AUTHOR

...view details