ಹಾವೇರಿ:ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಸರಾಸರಿ 84.5 ಮಿಲಿಮೀಟರ್ ಮಳೆಯಾಗಿದೆ. ಹಿರೇಕೆರೂರಿನಲ್ಲಿ ತಾಲೂಕಿನಲ್ಲಿ 36 ಮಿ.ಮೀ. ಆಗಿದ್ದರೆ, ಹಾನಗಲ್ ತಾಲೂಕಿನಲ್ಲಿ 169 ಮಿಲಿಮೀಟರ್ ಮಳೆಯಾಗಿದೆ. ಮಳೆ ಕಡಿಮೆಯಾಗದ ಹಿನ್ನೆಲೆ, ಶಾಲಾ -ಕಾಲೇಜುಗಳಿಗೆ ಶನಿವಾರ ಸಹ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ವರದಾ, ತುಂಗಭದ್ರಾ, ಧರ್ಮಾ ಮತ್ತು ಕುಮದ್ವತಿ ನದಿಗಳು ಮೈದುಂಬಿಗೊಂಡಿದ್ದು, ಹಲವು ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಜಿಲ್ಲೆಯ ಹರವಿ, ವರದಹಳ್ಳಿ, ನಾಗನೂರು, ನಾಗೇಂದ್ರನಮಟ್ಟಿ, ಕೂಡಲ, ಶೀಗಿಹಳ್ಳಿ, ಅಲ್ಲಿಪುರ, ಮಣ್ಣೂರು, ಶ್ಯಾಡಗುಪ್ಪಿ ಗ್ರಾಮಗಳಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ನೆರೆ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.